‘ಕೇಂದ್ರ ಸರಕಾರ ಪ್ರಜಾಪ್ರಭುತ್ವ ರಾಷ್ಟ್ರವನ್ನು ಬಾಯಿ ಮುಚ್ಚಿಸುತ್ತಿದೆ’ : ರಾಹುಲ್ ಗಾಂಧಿ ಟೀಕೆ

Prasthutha|

ನವದೆಹಲಿ : ಕೃಷಿ ಮಸೂದೆಯನ್ನು ವಿರೋಧಿಸಿದ್ದ ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಕ್ರಮವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ಭಾರತವನ್ನು  ಮೋದಿಯ ಸರಕಾರ ಬಾಯಿ ಮುಚ್ಚಿಸುತ್ತಿದೆ ಎಂದು ಅವರು ಆರೋಪಿಸಿದರು. ಸಂಸದರನ್ನು ಅಮಾನತುಗೊಳಿಸುವ ಮೂಲಕ ರೈತರ ಕುರಿತು ಸರ್ಕಾರಕ್ಕಿರುವ ಕಾಳಜಿಯನ್ನು ಎತ್ತಿ ತೋರಿಸಿದೆ ಎಂದವರು ಹರಿಹಾಯ್ದರು. ಈ ಸರ್ಕಾರದ ದುರಾಡಳಿತದಿಂದ ದೇಶದೆಲ್ಲೆಡೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯಿತೆಂದು ರಾಹುಲ್ ಗಾಂಧಿ ಟೀಕಿಸಿದರು. ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ನಿಯಮ ಪುಸ್ತಕವನ್ನು ಹರಿದುಹಾಕಿ ರಾಜ್ಯಸಭಾ ಉಪಾಧ್ಯಕ್ಷರಿಗೆ ಮುತ್ತಿಗೆ ಹಾಕಿದ ಎಂಟು ಸಂಸದರನ್ನು ರಾಜ್ಯ ಸಭಾಧ್ಯಕ್ಷರು ಒಂದು ವಾರಕ್ಕೆ ಅಮಾನತುಗೊಳಿಸಿದ್ದಾರೆ.

- Advertisement -

ಸಂಸತ್ತಿನ ನಿಯಮ 256ರ ಪ್ರಕಾರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಇವರ ವಿರುದ್ಧ ಪ್ರಸ್ತಾವನೆಯನ್ನು ಮಂಡಿಸಿದರು. ಧ್ವನಿ ಮತದಿಂದ ಪ್ರಸ್ತಾವನೆಯನ್ನು ಸಭೆ ಅಂಗೀಕರಿಸಿತು. ಇದರ ನಂತರ ಎಂಟು ಸದಸ್ಯರನ್ನು ಎಂಟು ದಿವಸಗಳವರೆಗೆ ಅಮಾನತುಗೊಳಿಸುವುದಾಗಿ ರಾಜ್ಯ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಘೋಷಿಸಿದರು.



Join Whatsapp