ಹಸಿವಿನಿಂದ ವ್ಯಕ್ತಿ ಸಾವು: ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ ಹೇಮಂತ್ ಸೊರೆನ್

0
27

ಬೊಕಾರೊ: 42 ವರ್ಷದ ವ್ಯಕ್ತಿಯೋರ್ವರು ಹಸಿವಿನಿಂದಾಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಬೊಕಾರೋದಲ್ಲಿ ವರದಿಯಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆದೇಶಿಸಿದ್ದಾರೆ.
ಮೃತರನ್ನು ಭೂಕಾಲ್ ಘಾಸಿ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಯಾವುದೇ ಪಡಿತರವಿಲ್ಲದೇ ಆಹಾರ ದೊರಕದ ಕಾರಣ ಅವರು ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ‘‘ಕಳೆದ ಕೆಲವು ದಿನಗಳಿಂದ ನಮ್ಮಲ್ಲಿ ಅಡುಗೆ ಮಾಡಲು ಏನೂ ಇರಲಿಲ್ಲ’’ ಎಂದು ಘಾಸಿಯವರ ಪತ್ನಿ ಹೇಳಿದ್ದಾರೆ.
ಮೃತ ವ್ಯಕ್ತಿಯ ಕುಟುಂಬದ ಹಕ್ಕುಗಳನ್ನು ಆಡಳಿತವು ನಿರಾಕರಿಸಿದೆ. ಘಾಸಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಮತ್ತು ಅವರ ಕುಟುಂಬಕ್ಕೆ ಪಡಿತರ ಚೀಟಿ ಅಥವಾ ಆಯುಷ್ಮಾನ್ ಕಾರ್ಡ್ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.