ಭಾರತ ಸರಕಾರ ಉಗ್ರ ಹಿಂದೂಗಳನ್ನು ಎದುರಿಸಲಿ: ಖಾಮಿನೈ

0
36

ಟೆಹ್ರಾನ್: ದಿಲ್ಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾಚಾರವನ್ನು ಖಂಡಿಸಿರುವ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಸಯ್ಯದ್ ಅಲಿ ಖಾಮಿನೈ, ಭಾರತ ಸರಕಾರವು ಉಗ್ರ ಹಿಂದೂಗಳನ್ನು ಎದುರಿಸಬೇಕು, ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳನ್ನು ನಿಯಂತ್ರಿಸಬೇಕು ಮತ್ತು ಮುಸ್ಲಿಮರ ಹತ್ಯಾಕಾಂಡವನ್ನು ತಡೆಯಬೇಕು ಎಂದು ಹೇಳಿದ್ದಾರೆ.
‘‘ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ವಿಶ್ವದಾದ್ಯಂತ ಮುಸ್ಲಿಮರ ಹೃದಯಗಳು ದುಃಖಿಸುತ್ತಿವೆ. ಇಸ್ಲಾಮ್ ಜಗತ್ತಿನಿಂದ ಭಾರತ ಪ್ರತ್ಯೇಕಗೊಳ್ಳುವುದನ್ನು ತಡೆಯಲು ಮುಸ್ಲಿಮರ ಹತ್ಯಾಕಾಂಡವನ್ನು ನಿಲ್ಲಿಸಲೇಬೇಕು’’ ಎಂದು ಖಾಮಿನೈ ಹೇಳಿದ್ದಾರೆ.