ತಾಲಿಬಾನ್ ಮುಂದೆ ಮಂಡಿಯೂರಿದ ಅಮೆರಿಕ

0
107

ಪಿ.ಸಿ. ಅಬ್ದುಲ್ಲಾ

ಯಾರೀ ತಾಲಿಬಾನ್? ಎಂದು ಪ್ರಶ್ನಿಸಿದರೆ, ಆಧುನಿಕ ಅಫ್ಘಾನಿಸ್ತಾನ್ ಇತಿಹಾಸದ ನಿರ್ಣಾಯಕ ಹಂತವೊಂದರಲ್ಲಿ ರೂಪುಗೊಂಡು ದೇಶದಲ್ಲಿ ಸುರಕ್ಷತೆಯನ್ನು ಖಾತರಿಗೊಳಿಸಿ 7 ವರ್ಷಗಳ ಕಾಲ ಆಡಳಿತ ನಡೆಸಿ ಅಂತಾರಾಷ್ಟ್ರೀಯ ಶಕ್ತಿಗಳ ವಿರೋಧದ ಮುಂದೆ 2 ದಶಕಗಳ ಕಾಲ ದೃಢವಾಗಿ ನಿಂತು ಹೋರಾಡಿ, ವಸಾಹತುಶಾಹಿ ಶತ್ರುಗಳನ್ನು ದೇಶದಿಂದ ಹೊರದಬ್ಬುವುದರಲ್ಲಿ ಜಯಗಳಿಸಿದ ಇಸ್ಲಾಮೀ ಆಂದೋಲನವಾಗಿದೆ ತಾಲಿಬಾನ್.

‘‘(ದೂತರೇ) ಒಂದು ವೇಳೆ ಅವರು (ಶತ್ರುಗಳು) ಶಾಂತಿಯ ಒಲವು ತೋರಿದರೆ, ನೀವು ಅದಕ್ಕೆ ಒಲವು ತೋರಿರಿ ಮತ್ತು ಅಲ್ಲಾಹನ ಮೇಲೆ ಭರವಸೆ ಇಡಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ.’’(ಕುರ್‌ಆನ್: 8-61)
ಕತರ್‌ನಲ್ಲಿ ಮತ್ತೊಂದು ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ 2020ರ ಫೆಬ್ರವರಿ 29 ಇತಿಹಾಸದ ನಿರ್ಣಾಯಕ ದಿನವೆಂದು ದಾಖಲಿಸಲ್ಪಟ್ಟಿತು. ಇತ್ತೀಚಿಗಿನ ವರೆಗೆ ಭಯೋತ್ಪಾದನೆಯ ಪರ್ಯಾಯ ಹಾಗೂ ಪ್ರತಿಗಾಮಿಯ ಉಪಮೆಯಾಗಿ ಚಿತ್ರೀಕರಿಸಲ್ಪಟ್ಟ ತಾಲಿಬಾನ್ ಮತ್ತು ಜಾಗತಿಕ ಶಾಂತಿಯ ನಾಟಕಕಾರ ಹಾಗೂ ಧಿಕ್ಕಾರದ ವಿಶ್ವರೂಪವಾದ ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಿದವು. ವಾಸ್ತವದಲ್ಲಿ ಅಫ್ಘಾನ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಮೆರಿಕ ಖುದ್ದು ಮುತುವರ್ಜಿ ವಹಿಸಿತು. ಆದರೆ ಅಮೆರಿಕ ಎಂದೂ ಒಪ್ಪಿಕೊಳ್ಳದ ತಾಲಿಬಾನ್ ಎಂಬ ಹೆಸರಿನ ‘ಇಸ್ಲಾಮಿಕ್ ಇಮಾರತ್ ಆಫ್ ಅಫ್ಘಾನಿಸ್ತಾನ್’ ಎಂಬ ಮುಖ್ಯ ಕಕ್ಷಿದಾರನ ವಿರುದ್ಧ ಆಗಾಗ್ಗೆ ಗತಿಗೇಡಿನ ಕಾನೂನನ್ನು ಜಾರಿಗೊಳಿಸುವುದನ್ನು ನೋಡುವಾಗ ನಗದೇ ಇರಲು ಯಾರಿಂದಲಾದರೂ ಸಾಧ್ಯವೇ?

ಮುಖ್ಯವಾಗಿ ನಾಲ್ಕು ಷರತ್ತುಗಳು ಮತ್ತು ಅದರ ವಿವರಗಳನ್ನು ಈ ಕರಾರು ಒಳಗೊಂಡಿದೆ. ಅಫ್ಘಾನಿಸ್ತಾನದ ಭೂಮಿಯಲ್ಲಿದ್ದುಕೊಂಡು ವ್ಯಕ್ತಿಗಳ, ಸಂಘಟನೆಗಳ, ಅಮೆರಿಕ ಮತ್ತದರ ಮಿತ್ರ ಪಕ್ಷಗಳ ಮತ್ತು ಭದ್ರತೆಯ ವಿರುದ್ಧ ಇರುವ ಕಾರ್ಯಚಟುವಟಿಕೆಗಳನ್ನು ತಡೆಯುವುದು. ಅಫ್ಘಾನ್‌ನಿಂದ ಎಲ್ಲಾ ವಿದೇಶ ಸೇನೆಗಳು ಹಿಂದಿರುಗಿ ಹೋಗಲು ವೇಳೆಯೊಂದನ್ನು ನಿಶ್ಚಯಿಸಿ ಅದನ್ನು ಜಾರಿಗೊಳಿಸುವುದು. (ವಿವರಣೆಯಲ್ಲಿ ಇದನ್ನು ಹದಿನಾಲ್ಕು ತಿಂಗಳುಗಳೆಂದು ನಿಖರಗೊಳಿಸಲಾಗಿದೆ.) ಈ ಎರಡೂ ಷರತ್ತುಗಳನ್ನು ಪಾಲಿಸುವೆವು ಎಂದು ಅಂತಾರಾಷ್ಟ್ರ ಸಾಕ್ಷಿಗಳ ಸಮ್ಮುಖದಲ್ಲಿ ಖಾತರಿಗೊಳಿಸಿದ ತಕ್ಷಣ (ಸಹಿ ಹಾಕಿದ ತಕ್ಷಣ) ತಾಲಿಬಾನ್ ನಿಯಂತ್ರಿತ ಇಸ್ಲಾಮಿಕ್ ಇಮಾರತ್ ಅಫ್ಘಾನಿನ ಆಂತರಿಕ ಚರ್ಚೆಗಳು 2020 ಮಾರ್ಚ್ 10ರಂದು ಆರಂಭಗೊಳ್ಳುತ್ತದೆ. ಅಫ್ಘಾನ್‌ನ ಆಂತರಿಕ ಚರ್ಚೆಗಳಲ್ಲಿ ಸಂಪೂರ್ಣ ಯುದ್ಧ ವಿರಾಮದ ಕುರಿತು ತೀರ್ಮಾನವನ್ನು ಕೈಗೊಳ್ಳುವುದು. ಅಫ್ಘಾನ್‌ನ ಭವಿಷ್ಯದ ರಾಜಕೀಯ ಮಾರ್ಗಸೂಚಿಯನ್ನು ಘೊಷಿಸುವುದರೊಂದಿಗೆ ಪೂರ್ಣ ರೂಪದ ಶಾಂತಿಯನ್ನು ಘೋಷಿಸುವುದು ಎಂಬಿತ್ಯಾದಿಗಳು ಮುಖ್ಯ ಷರತ್ತುಗಳು.

ಹಲವಾರು ವಿದೇಶಾಂಗ ವ್ಯವಹಾರಗಳ ಸಚಿವರು ಭಾಗವಹಿಸಿದ ಸಹಿ ಹಾಕುವ ಈ ಕಾರ್ಯಕ್ರಮದಲ್ಲಿ ಅಫ್ಘಾನ್ ಮುಸ್ಲಿಮರ ಸಾಂಪ್ರದಾಯಿಕ ಉಡುಪಿನೊಂದಿಗೆ ತಾಲಿಬಾನ್ ರಾಜಕೀಯ ವ್ಯವಹಾರಗಳ ನಾಯಕ ಮುಲ್ಲಾ ಅಬ್ದುಲ್ ಘನಿ ಬರ್ದಾರ್ ಮತ್ತು ಜನ್ಮತಾ ಅಫ್ಘಾನಿಯೂ ವ್ಯಾಸಂಗದ ವೇಳೆ ಲೆಬನೀಸ್ ಕ್ರೈಸ್ತನೂ ಕರ್ಮಯೋಗಿ ಸಾಮ್ರಾಜ್ಯತ್ವದ ಗುಲಾಮನೂ ಆದ ವಿಶೇಷ ರಾಯಭಾರಿ ಸೆಲ್ಮಾಯಿ ಖಲೀಲ್ ಸಾದು ಉಭಯ ಪಕ್ಷಗಳನ್ನು ಪ್ರತಿನಿಧಿಸಿ ಸಹಿ ಹಾಕಿದರು. 2001ರ ಕೊನೆಯಲ್ಲಿ ತಾಲಿಬಾನ್ ಸರಕಾರವನ್ನು ‘ಕಿತ್ತೆಸೆದ’ ನಂತರ ಅಮೆರಿಕ ಮೇಲಿಂದ ಮೇಲೆ ರಚಿಸಿದ, ಅಂತಾರಾಷ್ಟ್ರ ಅಂಗೀಕಾರವಿರುವ, ಕಾಬೂಲ್‌ನ ಮುನ್ಸಿಪಲ್ ಆಡಳಿತದ ಪ್ರತಿನಿಧಿಗಳು ಇರಬಾರದು ಎಂದ ತಾಲಿಬಾನ್ ಷರತ್ತನ್ನೂ ಅಮೆರಿಕಗೆಒಪ್ಪಬೇಕಾಗಿ ಬಂತು. ಕರಾರಿಗೆ ಸಹಿ ಹಾಕುವುದಕ್ಕೆ ಅಲ್ಪ ಮುಂಚೆ ಕಾಬೂಲ್‌ನಲ್ಲಿ ಪತ್ರಿಕಾಗೋಷ್ಠಿಯ ನಾಟಕವನ್ನಾಡಿದ ಕೈಗೊಂಬೆ ಸರಕಾರವನ್ನು ಸಹಿ ಹಾಕಲು ಘೋಷಣೆ ಮಾಡಿ ಅದಾರದೋ ಮಕ್ಕಳ ತಂದೆ ಎನಿಸಿಕೊಳ್ಳುವ ಪ್ರಯತ್ನವೂ ನಡೆಯಿತು.

ಯಾರೀ ತಾಲಿಬಾನ್? ಎಂದು ಪ್ರಶ್ನಿಸಿದರೆ, ಆಧುನಿಕ ಅಫ್ಘಾನಿಸ್ತಾನ್ ಇತಿಹಾಸದ ನಿರ್ಣಾಯಕ ಹಂತವೊಂದರಲ್ಲಿ ರೂಪುಗೊಂಡು ದೇಶದಲ್ಲಿ ಸುರಕ್ಷತೆಯನ್ನು ಖಾತರಿಗೊಳಿಸಿ 7 ವರ್ಷಗಳ ಕಾಲ ಆಡಳಿತ ನಡೆಸಿ ಅಂತಾರಾಷ್ಟ್ರೀಯ ಶಕ್ತಿಗಳ ವಿರೋಧದ ಮುಂದೆ 2 ದಶಕಗಳ ಕಾಲ ದೃಢವಾಗಿ ನಿಂತು ಹೋರಾಡಿ, ವಸಾಹತುಶಾಹಿ ಶತ್ರುಗಳನ್ನು ದೇಶದಿಂದ ಹೊರದಬ್ಬುವುದರಲ್ಲಿ ಜಯಗಳಿಸಿದ ಇಸ್ಲಾಮೀ ಆಂದೋಲನವಾಗಿದೆ ತಾಲಿಬಾನ್.

ತಾಲಿಬಾನ್ ಹಿನ್ನೆಲೆ
ಎರಡನೇ ಮಹಾಯುದ್ಧದ ನಂತರ ದೇಶ ರಾಷ್ಟ್ರಗಳು ರೂಪಗೊಳ್ಳುವುದರ ಮುಂಚೆ ಬ್ರಿಟಿಷ್ ವಸಾಹತುಶಾಹಿಯ ಮೇಲೆ ದಾಳಿ ನಡೆಸಿ ಹೊರದಬ್ಬಿದ ಏಕೈಕ ರಾಷ್ಟ್ರವಾದ ಅಫ್ಘಾನಿಸ್ತಾನವನ್ನು ಆಳ್ವಿಕೆ ನಡೆಸಿದ್ದು ಮುಹಮ್ಮದ್ ಝಹೀರ್ ಶಾಹ್ ರಾಜವಂಶವಾಗಿತ್ತು. 1973ರಲ್ಲಿ ರಷ್ಯಾದ ಬೆಂಬಲದೊಂದಿಗೆ ನಡೆದ ದಂಗೆಯಲ್ಲಿ ಕಮ್ಯುನಿಸಂ ಅಧಿಕಾರಕ್ಕೆ ಬರುವುದರೊಂದಿಗೆ ಮೂಲತಃ ಹಾಗೂ ಬಹುಸಂಖ್ಯಾತರಾಗಿರುವ ಮುಸ್ಲಿಮರಾದ ಅಫ್ಘಾನಿಗಳು ವಿರೋಧಿಸಿದರು. ನಂತರವೂ ಎರಡು ರಾಜಕೀಯ ದಂಗೆಯ ನಾಟಕಗಳು ಅನಾವರಣಗೊಂಡಾಗ ಕೆಂಪು ಸೇನೆ 1978ರಲ್ಲಿ ಅಫ್ಘಾನ್‌ನಲ್ಲಿ ರಷ್ಯನ್ ವಸಾಹತುಶಾಹಿ ಸ್ಥಾಪಿಸುವುದರೊಂದಿಗೆ ಪ್ರತಿಹೋರಾಟವು ಶಕ್ತಗೊಂಡಿತು.

ಶೀತಲ ಸಮರದ ಮುಖ್ಯ ಶತ್ರುವನ್ನು ಎದುರಿಸಲು ಸಿಕ್ಕ ಅವಕಾಶವನ್ನು ಅಮೆರಿಕ ಚೆನ್ನಾಗಿ ಉಪಯೋಗಿಸಿಕೊಂಡಿತು. ಅಫ್ಘಾನ್‌ನ ವಿವಿಧ ಬುಡಕಟ್ಟು ಜನಾಂಗಗಳ ನಿಯಂತ್ರಣದಲ್ಲಿರುವ ಹೋರಾಟ ಗುಂಪುಗಳಿಗೆ ಸೈನಿಕ ನೆರವು ಲಭಿಸಿತು. ಅರಬ್ ಜಗತ್ತಿನ ಹೆಚ್ಚಿನ ‘ಮುಸ್ಲಿಮ್’ ರಾಷ್ಟ್ರಗಳು ಅಫ್ಘಾನಿಸ್ತಾನಕ್ಕೆ ಕಮ್ಯುನಿಸ್ಟ್ ರಷ್ಯಾದಿಂದ ಪಾರಾಗಲು ಜಿಹಾದ್‌ಗೆ ಅಭಿಯಾನ ನಡೆಸಿತು. ಸುನ್ನೀ ಗುಂಪಿನ ಜೇಷ್ಠನೆಂದು ಕರೆಯಲ್ಪಡುವ ಸೌದಿ ಪ್ರಭುತ್ವವು ಎಲ್ಲರಿಗಿಂತ ಮುಂದಿನ ಸಾಲಿನಲ್ಲಿತ್ತು. ಅಂದು ಕುಮಾರನಾಗಿದ್ದ ಇಂದಿನ ರಾಜನ ನಾಯಕತ್ವದಲ್ಲಿ ಅಫ್ಘಾನ್ ಹೋರಾಟಕ್ಕೆ ವಿಶೇಷ ದೇಣಿಗೆಯನ್ನು ಸಂಗ್ರಹಿಸಲಾಯಿತು. ಫೆಲೆಸ್ತೀನ್ ಹೋರಾಟದ ಅರಬ್ ದಂಗೆಗಳು, ಈಜಿಪ್ಟ್ ಅನ್ವರ್ ಸಾದಾತ್‌ನ ಕ್ಯಾಂಪ್ ಡೇವಿಡ್ ಸಹಿ, ಇರಾನ್ ಕ್ರಾಂತಿ, ಮಕ್ಕಾದ ಜುಹೈಮಾನ್ ದಾಳಿಯಂತಹ ಘಟನೆಗಳ ಕಾರಣದಿಂದ ಸಿಂಹಾಸನಗಳು ಕಂಪಿಸ ತೊಡಗಿದಾಗ ಹೋರಾಟ ಮನೋಭಾವದ ವ್ಯಕ್ತಿಗಳನ್ನು ಪ್ರವಾಸಕ್ಕೆ ಕಳುಹಿಸುವುದು ಅರಬ್ ದೊರೆಗಳಿಗೆ ಅನಿವಾರ್ಯವಾಯಿತು. ಈ ರೀತಿ ಅರಬ್ ಜಗತ್ತಿನ ಹೆಚ್ಚಿನ ಎಲ್ಲಾ ಗುಪ್ತಚರ ಏಜೆನ್ಸಿಗಳು ಸಿಐಎ ಮಾದರಿಯಲ್ಲಿ ಅರಬ್ ಮುಜಾಹಿದ್‌ಗಳನ್ನು ಬೆಂಬಲಿಸಿದರು. ಅನುಕೂಲ ಸನ್ನಿವೇಶಗಳನ್ನು ಉಪಯೋಗಿಸಿ ವಸಾಹತುಶಾಹಿಯ ವಿರುದ್ಧ ಹೋರಾಟಕ್ಕಾಗಿ ಪ್ರಾಮಾಣಿಕವಾಗಿ ಜನ ಮತ್ತು ಧನವನ್ನು ವಿನಿಯೋಗಿಸಿ ಅವರ ಪರಿಶ್ರಮದಿಂದ ರೂಪುಗೊಂಡ ಅಫ್ಘಾನ್ ಅರಬ್ ಮುಜಾಹಿದ್ ಗುಂಪುಗಳು ಅಕ್ಷರಶಃ ಕೆಂಪು ಪಡೆಯನ್ನು ಧೂಳೀಪಟಗೊಳಿಸಿತು. 1988-89ರ ವೇಳೆಗೆ ಕೆಂಪು ಪಡೆ ಹಿಂದಿರುಗಬೇಕಾಯಿತು. ಅದರೊಂದಿಗೆ ಅಮೆರಿಕನ್ ಪ್ರಾಯೋಜಕತ್ವ ಕೊನೆಗೊಂಡಿತು. ಅದೇ ವರ್ಷ ಫೆಲೆಸ್ತೀನ್‌ನಲ್ಲಿ ಇಂತಿಫಾದ ಸ್ಫೋಟಗೊಂಡಿತು. ಆ ವೇಳೆ ರಕ್ತದಾಹಿ ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್ ಕುದುಸ್‌ನ ಮೇಲೆ ದಾಳಿ ನಡೆಸಿದನು. ಆದರೆ ಅರಬ್ ಅರಮನೆಗಳಲ್ಲಿರುವ ಯಾರೂ ಅದನ್ನು ತಿಳಿದೇ ಇರಲಿಲ್ಲ ಎಂಬುದು ಅರಬ್ ರಾಷ್ಟ್ರಗಳ ಹೋರಾಟದ ಸಂಕಲ್ಪವನ್ನೇ ಪ್ರಶ್ನಿಸುವಂತೆ ಮಾಡುತ್ತದೆ.

ರಷ್ಯಾ ಹಿಂದಿರುಗಿತಾದರೂ ಕಮ್ಯುನಿಸ್ಟ್ ಸರಕಾರವು ಪತನಗೊಳ್ಳಲಿಲ್ಲ. ಅದಕ್ಕೆ ಬೇಕಾದ ರಾಜಕೀಯ ಯೋಜನೆಗಳು ಯಾವುದೂ ಮುಜಾಹಿದ್‌ಗಳ ಬಳಿ ಇರಲಿಲ್ಲ. ಅಫ್ಘಾನ್‌ನಲ್ಲಿ ದೃಢವಾದ ಒಂದು ಸರಕಾರ ಬರುವುದು ಅಮೆರಿಕನ್ ಮಿತ್ರ ಪಡೆಗಳಿಗೂ ಇಷ್ಟವಿರಲಿಲ್ಲ. ಅಫ್ಘಾನ್‌ನಲ್ಲಿ ಹತ್ತು ಹಲವು ಸಶಸ್ತ್ರ ಗುಂಪುಗಳಿದ್ದರೂ ಮುಖ್ಯವಾಗಿ ಏಳು ಗುಂಪುಗಳು ಹೋರಾಟ ರಂಗದಲ್ಲಿದ್ದವು. ರಷ್ಯಾ ಹಿಂದಿರುಗಿದ ನಂತರ ಮುಖ್ಯ ಗುಂಪುಗಳೆಲ್ಲವೂ ಅವರದೇ ಆದ ಸ್ವಾಧೀನ ಕ್ಷೇತ್ರಗಳಲ್ಲಿ ‘ಆಡಳಿತ’ವನ್ನು ನಡೆಸತೊಡಗಿದರು. ಅದರೊಂದಿಗೆ ಆಂತರಿಕ ಸಂಘರ್ಷ ಭುಗಿಲೆದ್ದಿತು. ಬುರ್ಹಾನುದ್ದೀನ್ ರಬ್ಬಾನಿ ಮತ್ತು ಗುಲ್‌ಬುದ್ದೀನ್ ಹಿಕ್‌ಮತಿಯಾರ್‌ನ ಕೈಕೆಳಗೆ ಇರುವ ಎರಡು ಮುಖ್ಯ ಮೈತ್ರಿಪಡೆಗಳು ಪಾರಮ್ಯವನ್ನು ಮೆರೆದವು. ಅಮೆರಿಕ-ಸೌದಿ-ಪಾಕಿಸ್ತಾನ್ ಮೈತ್ರಿಯು ರಬ್ಬಾನಿಯನ್ನು ಬೆಂಬಲಿಸಿತು. ಇದರ ಹೊರತಾಗಿ ಈಶಾನ್ಯ ಉಝ್ಬೆಕ್‌ಗಳ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಅಬ್ದುರ್ರಶೀದ್ ದೋಸ್ತಾ ಮತ್ತು ವಾಯವ್ಯ ತಾಜಿಕ್‌ಗಳ ಕ್ಷೇತ್ರದಲ್ಲಿ ಅಹ್ಮದ್ ಶಾ ಮಸ್‌ಊದ್ ಮಿತ್ರಪಡೆಗಳು ಅಧಿಕಾರ ನಡೆಸಿದವು. ಯಾವುದೇ ಪ್ರದೇಶಗಳಲ್ಲೂ ಜನಜೀವನವು ಸುರಕ್ಷಿತವಾಗಿರಲಿಲ್ಲ. ತಮ್ಮ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ತೋಚಿದಂತೆ ತೆರಿಗೆ, ಹಫ್ತಾ ವಸೂಲಿ, ಅಪಹರಣ, ಮಾನಭಂಗಗಳು ನಡೆದವು. ಅಮೆರಿಕ ಮಿತ್ರಪಡೆಯಿಂದ ಲಭಿಸುವ ಆರ್ಥಿಕ ಸಹಾಯದಲ್ಲಷ್ಟೇ ರಬ್ಬಾನಿ ಮಿತ್ರಪಡೆಯ ಕಣ್ಣು ನೆಟ್ಟಿತ್ತು.

ತಾಲಿಬಾನ್‌ನ ಹುಟ್ಟು
ಅಫ್ಘಾನ್ ಜನಸಮುದಾಯದಲ್ಲಿ ನಿರಕ್ಷರತೆಯ ಪ್ರಮಾಣವು ಅತ್ಯಂತ ಹೆಚ್ಚಾಗಿತ್ತು. ಈ ದುರವಸ್ಥೆಯನ್ನು ಕಮ್ಯುನಿಸಂ ಶೋಷಣೆಗೈದಿತು. ಅದರೊಂದಿಗೆ ಧಾರ್ಮಿಕ ವಿದ್ವಾಂಸ ಕಡಿಮೆ ಪ್ರಮಾಣದಲ್ಲಿದ್ದರು. ಕುರ್‌ಆನ್, ಹದೀಸ್ ಪಾಂಡಿತ್ಯದಲ್ಲೂ, ಹನಫಿ ಫಿಕ್ಹ್‌ನಲ್ಲೂ ಪಾಂಡಿತ್ಯ ಗಳಿಸಿದ ದೇವ್‌ಬಂದ್ ವಿಚಾರಧಾರೆಯ ವಿದ್ವಾಂಸರು ಅವರಲ್ಲಿ ಪ್ರಮುಖರಾಗಿದ್ದರು. ರಷ್ಯನ್ ವಸಾಹತುಶಾಹಿಯ ವಿರುದ್ಧ ನಡೆದ ಹೋರಾಟದಲ್ಲಿ ಉಲಮಾಗಳು ಅಫ್ಘಾನ್ ಅರಬ್ ಮುಜಾಹಿದ್‌ಗಳನ್ನು ಬೆಂಬಲಿಸಿದರಾದರೂ, ಆಂತರಿಕ ಯುದ್ಧವು ತೀವ್ರಗೊಂಡ ವೇಳೆ ಅವರು ಹೋರಾಟರಂಗದಿಂದ ದೂರ ನಿಂತರು. ಅರಾಜಕತೆ, ಅಭದ್ರತೆ ಮತ್ತು ಭ್ರಷ್ಟಾಚಾರ ತುಂಬಿದ ಸಮೂಹವು ಪರಸ್ಪರ ಕಚ್ಚಾಡಿಕೊಂಡು ಸಾರ್ವಜನಿಕ ಜನಜೀವನವು ದುಸ್ತರಗೊಂಡ ಘಟ್ಟದಲ್ಲಿ ವಿದ್ವಾಂಸರಿಂದ ಸಂಘಟಿಸುವಿಕೆಯ ಹೊಸ ಪ್ರಯತ್ನಗಳು ನಡೆದವು.

1994ರಲ್ಲಿ ಕಂದಹಾರ್‌ನಲ್ಲಿ 11 ಯುವತಿಯರನ್ನು ಅಜ್ಞಾತ ಗುಂಪೊಂದು ಅಪಹರಣಗೈದ ಘಟನೆಯು ದೊಡ್ಡ ಸುದ್ದಿಯಾಗಿತ್ತು. ಬುಡಕಟ್ಟು ನೇತಾರರು ಪ್ರಾಂತ್ಯದ ಆಡಳಿತ ನಡೆಸುವ ರಬ್ಬಾನಿ ಗುಂಪಿನೊಂದಿಗೆ ದೂರು ನೀಡಿದಾಗ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದೆ ಅವರು ಕೈಚೆಲ್ಲಿ ಕುಳಿತರು. ಈ ಸನ್ನಿವೇಶದಲ್ಲಿ ಮುಲ್ಲಾ ಉಮರ್‌ನ ಕೈಕೆಳಗಿರುವ ವಿದ್ಯಾರ್ಥಿಗಳನ್ನು ಸಂಘಟಿಸಿ ‘ತಾಲಿಬಾನ್’(ವಿದ್ಯಾರ್ಥಿ ಗುಂಪು) ಎಂಬ ಹೋರಾಟ ಸೇನೆಯನ್ನು ರಚಿಸಿದರು. ಅವರು ಹೆಣ್ಮಕ್ಕಳನ್ನು ಪತ್ತೆಹಚ್ಚಿ ಅಪಹರಣಕಾರ ಗುಂಪಿನೊಂದಿಗೆ ಹೋರಾಡಿ ಅವರನ್ನು ಸೋಲಿಸಿದರು. ಭದ್ರತೆಗೆ ಬೆದರಿಕೆ ಉಂಟಾದಾಗ ಹಸ್ತಕ್ಷೇಪ ನಡೆಸಿದ ತಾಲಿಬಾನ್ ಶಾಂತಿಯನ್ನು ಪುನಃಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು. ಸಮರ್ಪಕ ಯೋಜನೆಯೊಂದಿಗೆ ಧಾರ್ಮಿಕ ವಿದ್ವಾಂಸರ ಸಮಾಲೋಚನಾ ಸಮಿತಿಯ ನಾಯಕತ್ವ ಹೊಂದಿರುವ ಈ ಗುಂಪು ಬಲು ಬೇಗನೇ ಬಲ ವರ್ಧಿಸಿಕೊಂಡಿತು. ಪ್ರತಿಯೊಂದು ಪ್ರದೇಶಗಳಲ್ಲೂ ತಾಲಿಬಾನ್ ಸೇನೆ ಪ್ರವೇಶಿಸಿದಾಗ ಯುದ್ಧಕೋರ ಗುಂಪುಗಳಲ್ಲಿ ಸೇರಿದ್ದ ಯುವಕರು ಅವರೊಂದಿಗೆ ಸೇರಿಕೊಂಡರು. ಪ್ರಾಂತ್ಯಗಳು, ನಗರಗಳು ಅವರ ಮುಂದೆ ದೊಡ್ಡ ತಡೆಯಿಲ್ಲದೆ ಸೋಲೊಪ್ಪಿಕೊಂಡಿತು. ಜಲಾಲಾಬಾದ್‌ನಂತಹ ಕೆಲವೆಡೆಗಳಲ್ಲಿ ಅನಿವಾರ್ಯವಾದ ಹೋರಾಟಗಳು ನಡೆಸಬೇಕಾಗಿ ಬಂತು. ಎರಡು ವರ್ಷಗಳ ಒಳಗೆ ರಾಜಧಾನಿ ನಗರವಾದ ಕಾಬೂಲ್ ಸಹಿತ ಅಫ್ಘಾನಿಸ್ತಾನ್‌ನ ಶೇಕಡ 80ರಷ್ಟು ಪ್ರದೇಶಗಳನ್ನು ಮಣಿಸಿ 1996ರ ಕೊನೆಯೊಂದಿಗೆ ಇಸ್ಲಾಮಿಕ್ ಇಮಾರತ್ ಎದ್ದು ಬಂತು.

ಭದ್ರತೆ, ಅಪರಾಧ ಕೃತ್ಯಗಳ ಮತ್ತು ಸಿವಿಲ್ ಮೊಕದ್ದಮೆಗಳಲ್ಲೂ ನ್ಯಾಯಯುತವಾದ ವಿಚಾರಣೆ, ಸಾರ್ವಜನಿಕ ಸಮಸ್ಯೆಗಳಲ್ಲಿ ಯುಕ್ತವಾದ ಪರಿಹಾರ, ಬುಡಕಟ್ಟು ಸೌಹಾರ್ದ ನಡೆಗಳು ಮೊದಲಾದ ನಿಲುವುಗಳನ್ನು ಸ್ವೀಕರಿಸಿ ಬಿನ್ ಲಾದೆನ್ ನಾಯಕತ್ವದಲ್ಲಿ ರಚಿಸಲ್ಪಟ್ಟ ಖಾಯಿದತುಲ್ ಜಿಹಾದ್(ಹೋರಾಟಗಾರರ ದತ್ತಾಂಶ) ನೇತಾರರು ಹಲವೆಡೆಗೆ ತಿರುಗಿ ಹೋದರು. ಸೌದಿ ಪ್ರಭುತ್ವದೊಂದಿಗೆ ಒಳ್ಳೆಯ ಸಂಬಂಧವನ್ನಿರಿಸಿಕೊಂಡ ಬಿನ್ ಲಾದೆನ್ ಸ್ವದೇಶಕ್ಕೆ ಮರಳಿದ್ದರು.

1990-91ರಲ್ಲಿ ಸದ್ದಾಮ್ ಹುಸೈನ್ ಕುವೈತ್ ಮೇಲೆ ದಾಳಿ ಮಾಡುವುದರೊಂದಿಗೆ ಅಮೆರಿಕನ್ ಸೈನಿಕ ಸಹಾಯವನ್ನು ಯಾಚಿಸುವ ಸೌದಿ ಪ್ರಭುತ್ವದ ತೀರ್ಮಾನವನ್ನು ಉಸಾಮ ಕಟುವಾಗಿ ವಿರೋಧಿಸಿದರು. ಸೌದಿಯಿಂದ ಹೊರಬಂದ ಆತ ತನ್ನ ಕೇಂದ್ರವನ್ನು ಸುಡಾನ್‌ಗೆ ಬದಲಾಯಿಸಿದ್ದರು. ನಗರ ಯೋಜನೆಯಲ್ಲಿ ಪರಿಣಿತನಾದ ಉಸಾಮ ಖರ್ತೂಮ್‌ನಲ್ಲೂ, ಮತ್ತಿತರ ಸುಡಾನ್ ನಗರಗಳಲ್ಲಿ ಸಂಚಾರ ಯೋಗ್ಯವಾದ ಹೈವೇಗಳನ್ನು ನಿರ್ಮಿಸಿದರು. ಸೌದಿ ಆಡಳಿತದ ಒತ್ತಡಗಳಿಗೆ ಮಣಿದು ಸುಡಾನಿನ ಉಮರುಲ್ ಬಶೀರ್ ಉಸಾಮನನ್ನು ಕೈಬಿಟ್ಟಾಗ ಆತ ಅಫ್ಘಾನ್‌ನ ಹಕ್ಕಾನಿ ಗುಂಪಿಗೆ ಸ್ವಾಧೀನವಿರುವ ಜಲಾಲಾಬಾದ್‌ಗೆ ತನ್ನ ಕೇಂದ್ರವನ್ನು ಬದಲಾಯಿಸಿದರು. ತಾಲಿಬಾನ್ ಜಲಾಲಾಬಾದ್‌ಗೆ ಪ್ರವೇಶಿಸಿದಾಗ ಉಸಾಮನ ಅಭಯವು ಮುಂದುವರೆಯಿತು. ತಾಲಿಬಾನ್ ಆಡಳಿತದ ಮತ್ತು ಅಫ್ಘಾನಿಸ್ತಾನದ ವಿರುದ್ಧ ಕಾರ್ಯಚಟುವಟಿಕೆಗಳನ್ನು ನಡೆಸಲಾರೆ ಎಂಬ ನಿಬಂಧನೆಯು ಉಸಾಮ-ಮುಲ್ಲಾ ಉಮರ್ ಮಾತುಕತೆಯಲ್ಲಿ ನಡೆದಿದ್ದು ಎಂಬುದನ್ನು ಅಧ್ಯಯನಗಳು ಸೂಚಿಸುತ್ತವೆ.

2001 ಸೆಪ್ಟೆಂಬರ್ 11ರಂದು ಅಮೆರಿಕ ನಗರಗಳಲ್ಲಿ ನಡೆದ ದಾಳಿಯ ನಂತರ ಅಮೆರಿಕದ ನಿಲುವಿನಲ್ಲಿ ಬದಲಾವಣೆ ಕಂಡು ಬಂತು. ಘಟನೆಗೆ ಹೊಣೆಗಾರನೆಂದು ಅಮೆರಿಕ ಆರೋಪಿಸಿದ ಉಸಾಮನನ್ನು ಹಸ್ತಾಂತರಿಸಲು ತಾಲಿಬಾನ್ ಸರಕಾರದೊಂದಿಗೆ ಅಮೆರಿಕ ಆಗ್ರಹಿಸಿತು. ಆಶ್ರಯ ನೀಡಿದ ಮಂದಿಗೆ ವಂಚಿಸಲಾರೆವು ಎಂದ ತಾಲಿಬಾನ್, ಉಸಾಮಾ ವಿರುದ್ಧ ಪುರಾವೆ ಇದ್ದರೆ ಅದನ್ನು ನೀಡಬೇಕೆಂದು ಹೇಳಿತು ಮತ್ತು ಆತ ತಪ್ಪಿತಸ್ಥನಾದರೆ ಅಫ್ಘಾನ್‌ನ ಇಸ್ಲಾಮಿಕ್ ಇಮಾರತ್ ವಿಚಾರಣೆಗೈದು ಶಿಕ್ಷಿಸುವುದೆಂದು ಜವಾಬು ನೀಡಿತು.

ಉಸಾಮಾ ಗುಂಪು 9/11 ಆಕ್ರಮಣ ನಡೆಸಿತು ಎಂಬುದಕ್ಕೆ ಇಲ್ಲಿಯ ವರೆಗೆ ಪುರಾವೆ ಲಭ್ಯವಾಗಿಲ್ಲ ಎಂಬುದು ಬೇರೆ ವಿಚಾರ. ಉಸಾಮಾನ ಹೆಸರಿನಲ್ಲಿ ನಕಲಿ ಆಡಿಯೋ ಟೇಪ್ ನಿರ್ಮಿಸಲಾಯಿತೆಂಬುದನ್ನು ಸಿಐಎ ಮೂಲಗಳು ನಂತರ ಬಹಿರಂಗಪಡಿಸಿವೆ. 9/11 ಘಟನೆಗಳ ಹೆಸರಿನಲ್ಲಿ ಅಮೆರಿಕದ ಆಡಳಿತವು ಆಲು ಸೌದಿಯಿಂದ ಪದೇ ಪದೇ ಭಾರೀ ಪ್ರಮಾಣದ ಲೆವಿ ಹೇರ ತೊಡಗಿತು. ಉಸಾಮಾನನ್ನು ಹಸ್ತಾಂತರಿಸದ ಹೆಸರಿನಲ್ಲಿ ತಾಲಿಬಾನ್ ಸರಕಾರದ ವಿರುದ್ಧ ಯುದ್ಧ ಘೋಷಿಸಿದ ಅಮೆರಿಕ ಅಫ್ಘಾನ್‌ನ ತಾಲಿಬಾನ್ ವಿರೋಧಿ ಯುದ್ಧಕೋರರನ್ನು ತನ್ನೆಡೆಗೆ ಸೆಳೆದುಕೊಂಡಿತು. ತಾಲಿಬಾನ್ ಸರಕಾರವನ್ನು ಮೊತ್ತಮೊದಲು ಅಂಗೀಕರಿಸಿ ರಾಯಭಾರಿ ಕಚೇರಿಯನ್ನು ತೆರೆದಿದ್ದ ಯುಎಇ, ಸೌದಿ ಸರಕಾರ ಆ ವೇಳೆ ಅಮೆರಿಕದೊಂದಿಗೆ ಸೇರಿಕೊಂಡವು.

ತಾಲಿಬಾನ್ ನಾಯಕತ್ವದಲ್ಲಿರುವ ಇಸ್ಲಾಮೀ ಇಮಾರತ್‌ನ ಕಾರಣದಿಂದ ಪ್ರಭಾವವನ್ನು ಕಳೆದುಕೊಂಡ ವಿವಿಧ ಅಫ್ಘಾನ್ ಗುಂಪುಗಳನ್ನು ತಾಲಿಬಾನ್‌ವಿರೋಧಿ ಅಭಿಯಾನ ನಡೆಸುವುದರಲ್ಲಿ ಅಮೆರಿಕ ಮಿತ್ರ ಪಕ್ಷ ಯಶಸ್ವಿಯಾಯಿತು. ದೋಸ್ತಮು ಮತ್ತು ಅಹ್ಮದ್ ಶಾ ಮಸ್‌ಊದ್ ಸೇನೆಗಳು, ಪಷ್ತೂ ಹೋರಾಟಗಾರರು ಒಟ್ಟಾಗಿ ಸೇರಿ ರಚಿಸಿದ ಉತ್ತರ ಭಾಗದ ಮೈತ್ರಿಯನ್ನು ಉಪಯೋಗಿಸಿ ಅಮೆರಿಕನ್ ವ್ಯೋಮ ಸೇನೆ ತಾಲಿಬಾನ್ ವಿರುದ್ಧ ನಡೆಸಿದ ತೀವ್ರ ದಾಳಿಯ ಕಾರಣ ಸರಕಾರವು ಬಿದ್ದು ಹೋಯಿತು. ತಾಲಿಬಾನ್ ಹೋರಾಟಗಾರರು ಬೆಟ್ಟ-ಗುಡ್ಡಗಳ ಕಡೆಗೂ, ಗ್ರಾಮಗಳ ಕಡೆಗೂ ಹಿಂದಿರುಗಿದರು. ನಂತರ ಗೆರಿಲ್ಲಾ ದಾಳಿಗಳನ್ನು ಸಂಘಟಿಸಿದರು. 19 ವರ್ಷಗಳ ಕಾಲ ನಡೆದ ಯುದ್ಧದಲ್ಲಿ ತಾಲಿಬಾನ್ ಕ್ರಮೇಣ ಒಂದೊಂದೇ ಪ್ರದೇಶಗಳನ್ನು ಮರಳಿ ಪಡೆಯಿತು. ಗೆದ್ದುಕೊಂಡ ಪ್ರದೇಶಗಳ ಬುಡಕಟ್ಟುಗಳೊಂದಿಗೆ ರಾಜಿಯಾಗಿ ಭದ್ರತೆ ಮತ್ತು ನ್ಯಾಯ ನೀತಿಯನ್ನು ಖಾತರಿಪಡಿಸಿದ ತಾಲಿಬಾನ್, ಭ್ರಷ್ಟಾಚಾರ ಮತ್ತು ಅತ್ಯಾಸೆಯಲ್ಲಿ ಮುಳುಗಿದ ಅಮೆರಿಕನ್ ಕೈಗೊಂಬೆಗಳಿಗೆ ಹೋಲಿಸುವಾಗ ಜನರು ತಾಲಿಬಾನ್ ಪರ ನಿಂತರು. ತಮ್ಮ ಪ್ರಭಾವವಿರುವ ಪ್ರದೇಶಗಳನ್ನು ಮರಳಿ ಪಡೆಯುವ ವೇಳೆ ಪ್ರಾದೇಶಿಕವಾಗಿ ಅಫ್ಘಾನಿಗಳಿಗೆ ಕಿರುಕುಳ ನೀಡದಿರಲು ತೀರ್ಮಾನಿಸಿದರು ಮತ್ತು ಆದರೆ ಅಮೆರಿಕನ್ ಮಿತ್ರಪಡೆ ಮತ್ತು ಕಡು ವಿರೋಧಿಗಳಾದ ಕೈಗೊಂಬೆಗಳನ್ನು ಮಾತ್ರ ಗುರಿಯಾಗಿಸಿ ಮುಂದಕ್ಕೆ ಸಾಗಿದ ತಾಲಿಬಾನ್ ಅಮೆರಿಕನ್ ಮಿತ್ರಕೂಟವನ್ನು ಸುತ್ತುವರಿದರು. ಒಬಾಮರ ಪ್ರಥಮ ಹಂತದ ಆಡಳಿತ ಕಾಲದಲ್ಲಿ ಅತ್ಯಂತ ಭೀಕರ ವೈಮಾನಿಕ ದಾಳಿಗಳು ನಡೆದಾಗ ತಾಲಿಬಾನ್ ಪ್ರಭಾವ ಕೇಂದ್ರಗಳ ಜನಜೀವನ ದುಸ್ತರಗೊಂಡಿತು. ಇದು ಅಫ್ಘಾನಿಗಳನ್ನು ಇನ್ನಷ್ಟು ಅಮೆರಿಕ ವಿರೋಧಿಯಾಗುವಂತೆ ಮಾಡಿತು.

ಸಂಧಾನ ಪ್ರಯತ್ನಗಳು
ಒಬಾಮ ಎರಡನೇ ಬಾರಿ ಅಧಿಕಾರಕ್ಕೇರುವ ಮುಂಚೆ ಉಸಾಮ ಬಿನ್ ಲಾದೆನ್‌ನ ಹತ್ಯೆ ನಡೆಸುವ ಮೂಲಕ ತಾಲಿಬಾನ್‌ನೊಂದಿಗೆ ಯಾವುದಾದರೊಂದು ರೀತಿಯಲ್ಲಿ ರಾಜಿಯಾಗಲು ಅೆುರಿಕ ಪ್ರಯತ್ನಿಸಿತು. ತಾಲಿಬಾನ್ ಆಡಳಿತ ಶೈಲಿಯನ್ನು ಟೀಕಿಸಿ ಪರಿಷ್ಕರಣೆಗಳನ್ನು ತಂದರೆ ಸಹಕಾರವನ್ನು ನೀಡುವುದಾಗಿ ಹೇಳಿ ನಿಕಟವಾಗಲು ಮಾಡಿದ ಪ್ರಯತ್ನಗಳನ್ನು ತಾಲಿಬಾನ್ ತಳ್ಳಿ ಹಾಕಿತು. ಒಂದೇ ಒಂದು ಬೇಡಿಕೆಯಲ್ಲಿ ತಾಲಿಬಾನ್ ಗಟ್ಟಿಯಾಗಿ ನಿಂತಿತು. ಅಮೆರಿಕನ್ ವಸಾಹತುಶಾಹಿಗಳು ಅಫ್ಘಾನ್‌ನಿಂದ ಸುರಕ್ಷಿತರಾಗಿ ಹೊರಹೋಗಲು ದಾರಿಯನ್ನು ಕಂಡು ಹುಡುಕುವುದು ಮಾತ್ರವೇ ನಿಮ್ಮೊಂದಿಗೆ ಮಾಡುವ ಚರ್ಚೆ ಮತ್ತು ಅಲ್ಪಸಂಖ್ಯಾತರು, ಮಹಿಳೆಯರು, ಮಾನವ ಹಕ್ಕುಗಳು ಮೊದಲಾದ ವಿಚಾರಗಳಲ್ಲಿ ನಾವು ನಿಮ್ಮೊಂದಿಗೆ ಚರ್ಚೆ ನಡೆಸಲಾರೆವು ಎಂದು ಸ್ಪಷ್ಟವಾಗಿ ಹೇಳಿತು. ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ವೇಳೆ ವಿದೇಶ ರಾಷ್ಟ್ರಗಳಲ್ಲಿ ಅಮೆರಿಕನ್ ಸೇನೆಯ ವಿರುದ್ಧ ನೇರ ಯುದ್ಧಗಳನ್ನು ನಡೆಸದಂತೆ ತಳೆದ ನಿಲುವಿನ ಮೂಲಕ ತಾಲಿಬಾನ್‌ನೊಂದಿಗೆ ಸಂಧಾನ ಚರ್ಚೆಗಳು ಪುನರಾರಂಭಗೊಂಡಿತು.

ದೋಹಾದಲ್ಲಿ ತಾಲಿಬಾನ್ ಕಚೇರಿಯನ್ನು ತೆರೆದು ಚರ್ೆಗಳನ್ನು ಸಕ್ರಿಯಗೊಳಿಸಿತು. ಈ ರೀತಿ ಒಂದೂವರೆ ವರ್ಷದ ಸುದೀರ್ಘ ಚರ್ಚೆಗಳ ಕೊನೆಗೆ ತಾಲಿಬಾನ್ ಮುಂದಿರಿಸಿದ ಬೇಡಿಕೆಗಳು ಹೆಚ್ಚುಕಡಿಮೆ ಎಲ್ಲವನ್ನೂ ಅದು ಒಪ್ಪಿಕೊಂಡಿತು. ಹದಿನಾಲ್ಕು ತಿಂಗಳ ಒಳಗೆ ಅಮೆರಿಕ ನಾಯಕತ್ವದ ಎಲ್ಲಾ ಸೇನೆಗಳು ಅಫ್ಘಾನ್‌ನಿಂದ ಹೊರ ಹೋಗುವುದೆಂಬ ಕರಾರಿಗೆ ಸಹಿ ಹಾಕಿತು.
-ಸಶೇಷ