ಕೋಡಿಂಗ್ ಮೂಲಕ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿಯ ಬದಲಿಗೆ ರಾಷ್ಟ್ರ ಧ್ವಜದ ಫೋಟೋ | ಯುವಕನ ಸಾಧನೆ

Prasthutha|

ಕೋವಿಡ್‌ ಎರಡನೇ ಅಲೆ ವ್ಯಾಪಕವಾಗುತ್ತಿರುವ ನಡುವೆ, ಲಸಿಕೆ ಪಡೆಯುವುದೇ ಸಾಂಕ್ರಾಮಿಕತೆಯನ್ನು ಕೊನೆಗೊಳಿಸಲು ಇರುವ ಅಂತಿಮ ಪರಿಹಾರ ಎಂಬುದು ತಜ್ಞರ ಅಭಿಪ್ರಾಯ. ಆದರೆ, ನಿರೀಕ್ಷೆಗೆ ತಕ್ಕಂತೆ ಅಥವಾ ತುರ್ತು ಅಗತ್ಯವಿರುವಷ್ಟು ಲಸಿಕೆಗಳನ್ನು ಪೂರೈಸುವಲ್ಲಿ ಸರಕಾರ ವಿಫಲವಾಗಿದೆ. ಈ ನಡುವೆ, ಲಸಿಕೆ ಸರ್ಟಿಫಿಕೇಟ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೊ ಕಾಣಿಸಿಕೊಂಡಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

- Advertisement -

ಲಸಿಕೆ ಪೂರ್ಣಗೊಂಡವರು ತಮ್ಮ ಲಸಿಕೆ ಸರ್ಟಿಫಿಕೇಟ್‌ ಗಳನ್ನು ಆನ್‌ ಲೈನ್‌ ಮೂಲಕ ಪಡೆಯುವಾಗ ಅದರಲ್ಲಿ ತಮ್ಮ ವಿವರಗಳೊಂದಿಗೆ ಕೆಳಗೆ ಪ್ರಧಾನಿ ಮೋದಿಯ ಫೋಟೊ ಇರುವ ಸರ್ಟಿಫಿಕೇಟ್‌ ಡೌನ್‌ ಲೋಡ್‌ ಆಗುತ್ತಿರುವುದು ಕಂಡು ಅಚ್ಚರಿಗೀಡಾಗಿದ್ದಾರೆ.

ಇದರಿಂದಾಗಿ ಸಾಕಷ್ಟು ಮಂದಿಗೆ ಅಸಮಾಧಾನವಾಗಿದೆ. ಏನೂ ಮಾಡಲಾಗದೆ ಕೆಲವರು ಅಸಂತುಷ್ಟರಾದರೆ, ಇನ್ನು ಕೆಲವರು ಇದರಿಂದ ಮುಕ್ತವಾಗುವ ಮಾರ್ಗವನ್ನೂ ಕಂಡುಹಿಡಿದಿದ್ದಾರೆ.

- Advertisement -

ತಮ್ಮ ಲಸಿಕೆ ಸರ್ಟಿಫಿಕೇಟ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೊ ಅಳಿಸಿ, ಆ ಜಾಗದಲ್ಲಿ ರಾಷ್ಟ್ರಧ್ವಜ ಪರಿವರ್ತನೆಗೊಳ್ಳುವಂತೆ ಕೋಡಿಂಗ್‌ ಒಂದನ್ನು ರೆಡ್ಡಿಟ್‌ ನಲ್ಲಿ ಯುವಕನೊಬ್ಬ ಪ್ರಕಟಿಸಿದ್ದಾನೆ. @glorious_albus ಎಂಬ ಖಾತೆಯಲ್ಲಿ ಇದನ್ನು ಮಾಡುವ ವಿಧಾನದ ಬಗ್ಗೆ ಮಾರ್ಗದರ್ಶನ ಮಾಡಲಾಗಿದೆ.

ಪ್ರಧಾನಿ ಮೋದಿ ಅವರ ಭಾವಚಿತ್ರವಿಲ್ಲದ ಸರ್ಟಿಫಿಕೇಟ್‌ ಗೆ ಮಾನ್ಯತೆಯಿದೆಯೇ? ಎಂದು ಕೇಳಲಾದ ಪ್ರಶ್ನೆಗೆ ಈ ಪೋಸ್ಟ್‌ ಮಾಡಿದ ವ್ಯಕ್ತಿಗೂ ಗೊತ್ತಿಲ್ಲ. ಆದರೆ, ಈ ಬಗ್ಗೆ ವಿವರ ನೀಡಿರುವ ಅವರು, ಸರ್ಟಿಫಿಕೇಟ್‌ ನಲ್ಲಿನ ಕ್ಯುಆರ್ ಕೋಡ್‌ ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ, ಹೀಗಾಗಿ ಸೈದ್ಧಾಂತಿಕವಾಗಿ ಇದು ಸರಿ, ಆದರೆ ಈ ಬಗ್ಗೆ ನಾನು ಸ್ಪಷ್ಟವಾಗಿ ಹೇಳಲಾರೆ.

Join Whatsapp