ಶಿವಾಜಿ-ಮೋದಿ ಹೋಲಿಕೆ: ಭಟ್ಟಂಗಿತನದ ಪರಮಾವಧಿ

0
40

-ಡಾ.ರಾಮ್ ಪುನಿಯಾನಿ

ಮಹಾರಾಷ್ಟ್ರದಲ್ಲಿ ಶಿವಾಜಿ ಅತ್ಯಂತ ಎತ್ತರದ ಸ್ಥಾನವುಳ್ಳ ಜನನಾಯಕರಾಗಿದ್ದಾರೆ. ಸಮಾಜದ ವಿವಿಧ ವರ್ಗಗಳು ನಾನಾ ಕಾರಣಗಳಿಗಾಗಿ ಶಿವಾಜಿಗೆ ಉನ್ನತ ಸ್ಥಾನವನ್ನು ನೀಡಿದ್ದಾರೆ. ಆತನ ಕುರಿತಾದ ಜಾನಪದ ಕಥೆಗಳು ಮಹಾರಾಷ್ಟ್ರದಲ್ಲಿ ಯಥೇಚ್ಛವಾಗಿ ಕಾಣಬಹುದಾಗಿದೆ. ಆತನ ಪ್ರತಿಮೆಗಳು, ಆತನ ಕುರಿತಾದ ಜನಪ್ರಿಯ ಹಾಡುಗಳು ಅತ್ಯಂತ ಪ್ರಚಲಿತವಾಗಿವೆ. ಪೊವಾಡ ಎಂದು ಕರೆಯಲಾಗುವ ಈ ಜನಪದ ಗೀತೆಗಳು ಆತನ ಬಹುವಿಧ ಕಾರ್ಯಗಳನ್ನು ಪ್ರಶಂಸಿಸುತ್ತವೆ. ದಿಲ್ಲಿ ರಾಜ್ಯ ಬಿಜೆಪಿ ಘಟಕದಿಂದ ಆಯೋಜಿಸಲಾಗಿದ್ದ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಬಿಡುಗಡೆಗೊಳಿಸಲಾದ ಜಯ ಭಗವಾನ್‌ರ ‘ಆಜ್ ಕಾ ಶಿವಾಜಿ: ನರೇಂದ್ರ ಮೋದಿ’ (ಇಂದಿನ ಶಿವಾಜಿ: ನರೇಂದ್ರ ಮೋದಿ) ಎಂಬ ಪುಸ್ತಕಕ್ಕೆ ಮಹಾರಾಷ್ಟ್ರದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ಹಲವು ನಾಯಕರು ಕೆಂಡಾಮಂಡಲರಾಗಿದ್ದಾರೆ. ಶಿವಸೇನೆಯ ಸಂಜಯ್ ರಾವತ್, ಬಿಜೆಪಿ ಸದಸ್ಯರಾಗಿರುವ ಶಿವಾಜಿ ವಂಶಜ ವಂಶಬ್ ಸಂಭಾಜಿ ರಾಜೆ ಈ ವಿಚಾರಕ್ಕೆ ಸಂಬಂಧಿಸಿ ತಮ್ಮ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಭಾಜಿ ರಾಜೇ, ‘‘ಮತ್ತೊಮೆ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರನ್ನು ನಾವು ಗೌರವಿಸುತ್ತೇವೆ. ಆದರೆ ಅವರದ್ದು(ಮೋದಿ) ಅಥವಾ ಜಗತ್ತಿನಲ್ಲಿ ಬೇರೆ ಯಾರದ್ದೋ ಹೋಲಿಕೆ ಛತ್ರಪತಿ ಶಿವಾಜಿ ಮಹಾರಾಜ್‌ರೊಂದಿಗೆ ಮಾಡಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ. ಎನ್‌ಸಿಪಿ ನಾಯಕ ಜಿತೇಂದ್ರ ಆವ್ಹಾಡ್, ಮಹಾರಾಷ್ಟ್ರ ಅಭಿಮಾನವಾಗಿರುವ ಶಿವಾಜಿಯನ್ನು ಮೋದಿ ಮತ್ತು ಬಿಜೆಪಿ ಅಪಮಾನಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯಕಾಲೀನ ಮರಾಠ ಸೇನಾನಿಯ ಕುರಿತಂತೆ ಯಾವುದೆ ವಿವಾದ ಸೃಷ್ಟಿಯಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಸಂಭಾಜಿ ಬ್ರಿಗೇಡ್, ಆಕ್ಷೇಪಾರ್ಹ ವಿಷಯಗಳನ್ನು ಹೊಂದಿದೆ ಎಂಬ ಕಾರಣಕ್ಕಾಗಿ ಜೇಮ್ಸ್ ಲೇನ್‌ರ ‘ಶಿವಾಜಿ: ಎ ಹಿಂದೂ ಕಿಂಗ್ ಇನ್ ಇಸ್ಲಾಮಿ ಇಂಡಿಯಾ’ ಎಂಬ ಪುಸ್ತಕವನ್ನು ನಿಷೇಧಿಸುವಂತೆ ಒತ್ತಾಯಿಸಿತ್ತು. ಜೇಮ್ಸ್ ಲೇನ್‌ಗೆ ಅವರ ಪುಸ್ತಕ ಶೋ ಕಾರ್ಯಕ್ಕೆ ನೆರವು ನೀಡಿದ್ದ ಪುಣೆ ಭಂಡಾರ್‌ಕಾರ್ ಇನ್ಸ್ಟಿಟ್ಯೂಟ್‌ನಲ್ಲಿ ದಾಂಧ ನಡೆಸಲಾಗಿತ್ತು. ಶಿವಾಜಿಯ ವಿಚಾರದಲ್ಲಿ ಜಾತಿ ಆಧಾರಿತ ವಿಷಯಗಳೂ ಕೆಲವು ಸಮಯಗಳಿಂದ ಮುಂಚೂಣಿಗೆ ಬರುತ್ತಿವೆ. ಶಿವಾಜಿಗೆ ಸಂಬಂಧಿಸಿದ ಜನಪ್ರಿಯ ಸಂಗತಿಗಳ ಕುರಿತ ಲೇಖನ ಬರೆದಿರುವ ಬಾಬಾ ಸಾಹೇಬ್ ಪುರಂದರೆ ಎಂಬ ಹೆಸರಿನ ಓರ್ವ ಬ್ರಾಹ್ಮಣ ಲೇಖನಕನನ್ನು ಶಿವಾಜಿ ಪ್ರತಿಮೆಗೆ ರಚಿಸಲಾಗಿರುವ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡುವ ಚರ್ಚೆ ಮತ್ತೊಂದು ಹಂತದಲ್ಲಿ ನಡೆದಿತ್ತು. ಆದರೆ ಮರಾಠ ಸೇನಾನಿಯ ಪ್ರತಿಮೆಗಾಗಿ ರಚಿಸಿದ ಸಮಿತಿಗೆ ಬ್ರಾಹ್ಮಣನೋರ್ವ ನಾಯಕತ್ವ ವಹಿಸುವುದನ್ನು ಮರಾಠ ಮಹಾಸಂಘ್ ಮತ್ತು ಶಿವಧರ್ಮ ನಾಯಕರು ವಿರೋಧ ವ್ಯಕಪಡಿಸಿದ್ದರು.

ಒಂದೆಡೆ ಶಿವಾಜಿಯ ಸುತ್ತ ಹಲವು ವಿವಾದಗಳು ಉದ್ಭವಿಸುತ್ತಿರುವಂಯೇ, ಮತ್ತೊಂದೆಡೆ ವಿವಿಧ ರಾಜಕೀಯ ಶಕ್ತಿಗಳು ತಮ್ಮ ತಮ್ಮ ಲೆಕ್ಕಾಚಾರಕ್ಕೆ ಅನುಗುಣವಾಗಿ ಅವರ ವರ್ಚಸ್ಸನ್ನು ರೂಪಿಸಿದ್ದಾರೆ ಎಂಬುದು ಕೂಡ ಸತ್ಯವಾಗಿದೆ. ಇಂಥದ್ದರಲ್ಲಿ, ಅಂತಿಮವಾಗಿ ನಾವು ಯಾರನ್ನು ಅಸಲಿ ಶಿವಾಜಿ ಎಂದು ಭಾವಿಸಬೇಕೆಂಬ ಪ್ರಶ್ನೆ ಉದ್ಭವಿಸುವುದು ಕೂ ಸಹಜವಾಗಿದೆ. ಈ ವಿಚಾರದಲ್ಲಿ ಯೋಜನೆಯ ಎರಡು ಸ್ಪಷ್ಟ ತೊರೆಗಳನ್ನು ನೋಡಬಹುದಾಗಿದೆ. ಒಂದೆಡೆ ಶಿವಾಜಿಯನ್ನು ಗೋವು ಮತ್ತು ಬ್ರಾಹ್ಮಣರನ್ನು ಗೌರವಿಸುವ (ಗೋ ಬ್ರಾಹ್ಮಣ್ ಪ್ರತಿಪಾಲಕ್) ಮತ್ತು ಮುಸ್ಲಿಮ್ ವಿರೋಧಿ ರಾಜನೆಂದು ಪ್ರಸ್ತುತಪಡಿಸಲಾಗುತ್ತಿದೆ. ಈ ಅಭಿಪ್ರಾಯವನ್ನು ಲೋಕಮಾನ್ಯ ತಿಲಕರ ಕಾಲದಲ್ಲಿ ಮುನ್ನೆಲೆಗೆ ತರಲಾಯಿತು ಮತ್ತು ತಮ್ಮ ರಾಜಕೀಯ ಅಜೆಂಡಾಕ್ಕೆ ಸರಿಹೊಂದುವ ಚಾರಿತ್ರಿಕ ವ್ಯಕ್ತಿಯನ್ನು ಶೋಧಿಸುತ್ತಿದ್ದ ಹಿಂದೂ ರಾಷ್ಟ್ರೀಯವಾದಿಗಳು ಅದನ್ನು ಅಪ್ಪಿಕೊಂಡರು. ನಾಥೂರಾಮ್ ಗೋಡ್ಸೆ ಗಾಂಧೀಜಿಯನ್ನು ಟೀಕಿಸುತ್ತಾ, ಅವರ ರಾಷ್ಟ್ರೀಯವಾದವು ಶಿವಾಜಿ ಮತ್ತು ಮಹಾ ರಾಣಾ ಪ್ರತಾಪರ ರಾಷ್ಟ್ರೀಯವಾದದ ಮುಂದೆ ಕುಬ್ಜವಾಗಿದೆ ಎಂದು ಹೇಳಿದ್ದ.

ಮಹಾರಾಣಾ ಪ್ರತಾಪ್ ಮತ್ತು ಶಿವಾಜಿಯನ್ನು ಹಿಂದೂ ರಾಷ್ಟ್ರೀಯವಾದದ ಪ್ರತೀಕ ಎಂದು ತೋರಿಸಲಾಗುತ್ತಿದೆ ಮತ್ತು ಈ ಇಬ್ಬರು ರಾಜರುಗಳ ಜೀವನ ಮತ್ತು ಸಾಧನೆಗಳನ್ನು ಮುಸ್ಲಿಮ್ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಶಿವಾಜಿಯನ್ನು ದನ ಮತ್ತು ಬ್ರಾಹ್ಮಣರ ಆರಾಧಕನೆಂದು ತೋರಿಸಿ, ಹಿಂದೂ ರಾಷ್ಟ್ರೀಯವಾದಿಗಳು ತಮ್ಮ ಬ್ರಾಹ್ಮಣ್ಯವಾದಿ ಅಜೆಂಡಾವನ್ನೂ ಮುಂದೆ ಸಾಗಿಸುತ್ತಿದ್ದಾರೆ. ಆರೆಸ್ಸೆಸ್ ಮತ್ತು ಸಂಘಪರಿವಾರ ನೇತೃತ್ವದ ಹಿಂದೂ ರಾಷ್ಟ್ರೀಯವಾದದ ಪ್ರಸಕ್ತ ಅಜೆಂಡಾಕ್ಕೆ ಶಿವಾಜಿಯ ಈ ವರ್ಚಸ್ಸು ಬಹಳ ಉತ್ತಮವಾಗಿ ಸರಿ ಹೊಂದುತ್ತದೆ.

2014ರ ಸಾರ್ವತ್ರಿಕ ಚುನಾವಣೆಗೂ ಮೊದಲು ಮುಂಬೈಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಔರಂಗಜೇಬ್‌ನ ಖಜಾನೆ ಲೂಟಿ ಮಾಡುವ ಉದ್ದೇಶದಿಂದ ಶಿವಾಜಿ ಸೂರತ್‌ನ ಮೇಲೆ ಆಕ್ರಮಣ ನಡೆಸಿದ್ದ ಎಂದು ಹೇಳಿದ್ದರು. ಶಿವಾಜಿ ಮತ್ತು ಔರಂಗಜೇಬ್, ಶಿವಾಜಿ ಮತ್ತು ಅಫ್ಝಲ್ ಖಾನ್ ನಡುವೆ ನಡೆದ ಯುದ್ಧಗಳನ್ನು ಹಿಂದುಗಳು ಮತ್ತು ಮುಸ್ಲಿಮರ ನಡುವಿನ ಯುದ್ಧಗಳಂತೆ ಪ್ರಚಾರಪಡಿಸಲಾಗುತ್ತಿದೆ. ವಾಸ್ತವದಲ್ಲಿ, ಸೂರತ್ ಒಂದು ಶ್ರೀಮಂತ ಬಂದರು ನಗರ ಆಗಿದ್ದ ಕಾರಣ ಅದನ್ನು ಲೂಟಿ ಮಾಡಲಾಗಿತ್ತು ಮತ್ತು ಬಾಲ ಸಾಮಂತ್‌ನ ಪುಸ್ತಕವು ಈ ದಾಳಿಯ ಕುರಿತಂತೆ ವಿಸ್ತಾರವಾಗಿ ಬೆಳಕು ಚೆಲ್ಲುತ್ತದೆ. ಗಮನಾರ್ಹ ಸಂಗತಿಯೆಂದರೆ, ವಾಸ್ತವದಲ್ಲಿ 1656ರಲ್ಲಿ ಮರಾಠ ಮುಖ್ಯಸ್ಥ ಚಂದ್ರ ರಾವ್ ಮೋರೆಯಿಂದ ಜಾವ್ಲಿಯ ಕೋಟೆಯನ್ನು ವಶಪಡಿಸಿಕೊಂಡ ಬಳಿಕ ಶಿವಾಜಿಯ ವಿಜಯ ಯಾತ್ರೆ ಆರಂಭವಾಗಿತ್ತು. ಆ ವೇಳೆ ಆತ ಜಾವ್ಲಿ ಖಜಾನೆಯನ್ನು ವಶಪಡಿಸಿಕೊಂಡಿದ್ದರು. ಶಿವಾಜಿ ಮತ್ತು ಔರಂಗಜೇಬ್ ನಡುವಿನ ಯುದ್ಧವು ಹಿಂದು-ಮುಸ್ಲಿಮರ ನಡುವಿನ ಕದನವಾಗಿರಲಿಲ್ಲ. ಔರಂಗಜೇಬ್ ಕಡೆಯಿಂದ ರಾಜಾ ಜಯಸಿಂಗ್ ಶಿವಾಜಿಯ ವಿರುದ್ಧ ಹೋರಾಡುತ್ತಿದ್ದರೆ, ಶಿವಾಜಿಯ ಅನೇಕ ಸೇನಾ ನಾಯಕರು ಮುಸ್ಲಿಮರಾಗಿದ್ದರು ಎಂಬ ವಾಸ್ತವವು ಇದನ್ನು ಸ್ಪಷ್ಟಪಡಿಸುತ್ತದೆ.

ಶಿವಾಜಿಯ ಗುಪ್ತಚರ ವ್ಯವಹಾರಗಳ ಮಂತ್ರಿಯ ಹೆಸರು ಕಾಝಿ ಹೈದರ್ ಎಂದಾಗಿತ್ತು. ದರ್ಯಾ ಸಾರಂಗ್ ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥನಾಗಿದ್ದ, ದೌಲತ್ ಖಾನ್ ನೌಕಾ ಸೇನೆಯ ಮುಖ್ಯಸ್ಥನಾಗಿದ್ದ, ಇಬ್ರಾಹೀಂ ಖಾನ್ ಕೂಡ ಆತನ ಸೇನೆಯ ಉನ್ನತ ಹುದ್ದೆಯಲ್ಲಿದ್ದ. ರಾಜನು ಹಿಂದು ಆಗಿರಲಿ ಅಥವಾ ಮುಸ್ಲಿಮನಾಗಿರಲಿ ಅವರು ತಮ್ಮ ಆಡಳಿತ ಮತ್ತು ಸೇನೆಗೆ ಧರ್ಮದ ಆಧಾರದಲ್ಲಿ ನೇಮಕಾತಿಯನ್ನು ನಡೆಸುತ್ತಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಶಿವಾಜಿ ಮತ್ತು ಅಫ್ಝಲ್ ಖಾನ್ ನಡುವಿನ ಯುದ್ಧದಲ್ಲಿ ರುಸ್ತಮ್-ಎ-ಜಮಾನ್ ಶಿವಾಜಿಯ ಕಡೆಯಲ್ಲಿದ್ದರು ಮತ್ತು ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ ಅಫ್ಝಲ್ ಖಾನ್‌ಗೆ ಜೊತೆ ನಿಂತಿದ್ದರು.
ಶಿವಾಜಿಯ ಜನಪ್ರಿಯತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಅದಕ್ಕೆ ಕಾರಣ ಆತ ತನ್ನ ಪ್ರಜೆಗಳ ಕಲ್ಯಾಣದ ಕುರಿತು ಕಾಳಜಿ ಹೊಂದಿದ್ದರು. ಆತ ಸಾಮಾನ್ಯ ಕೃಷಿಕರ ಮೇಲಿನ ತೆರಿಗೆಯ ಹೊರೆಯನ್ನು ತೆಗೆದುಹಾಕಿದರು ಮತ್ತು ಜಮೀನ್ದಾರರು ರೈತರ ಮೇಲೆ ನಡೆಸುತ್ತಿದ್ದ ದೌರ್ಜನ್ಯಗಳಿಗೆ ಕಡಿವಾಣ ಹಾಕಿದರು. ಶಿವಾಜಿಯ ಜೀವನ ಚಿತ್ರಣವು ಕಾಮ್ರೇಡ್ ಗೋವಿಂದ್ ಪನ್ಸಾರೆಯವರ ‘ಹೂ ವಾಝ್ ಶಿವಾಜಿ’(ಶಿವಾಜಿ ಯಾರು?) ಮತ್ತು ಜಯಂತ್ ಗಡ್ಕರಿಯವರ ಶಿವಾಜಿ: ಕಿಂಗ್ ಡುಯಿಂಗ್ ಪೀಪಲ್ಸ್ ವೆಲ್ಫೇರ್ (ಶಿವಾಜಿ: ಜನರ ಕಲ್ಯಾಣ ಮಾಡಿದ ರಾಜ) ಪುಸ್ತಕದಲ್ಲಿ ಬಹಳ ಉತ್ತಮವಾಗಿ ದಾಖಲಿಸಲ್ಪಟ್ಟಿದೆ.

ಶಿವಾಜಿ ಕ್ಷತ್ರಿಯನಲ್ಲದ ಕಾರಣಕ್ಕಾಗಿ ಅವರಿಗೆ ಪಟ್ಟಾಭಿಷೇಕ ನಡೆಸಲೂ ಬ್ರಾಹ್ಮಣರು ನಿರಾಕರಿಸಿದ್ದರು. ಆ ನಂತರ ಇದಕ್ಕಾಗಿ ಭಾರೀ ದಕ್ಷಿಣೆ ನೀಡಿ ಗಂಗಾ ಭಟ್ಟ ಎಂಬ ಹೆಸರಿನ ಓರ್ವ ಬ್ರಾಹ್ಮಣನನ್ನು ಕಾಶಿಯಿಂದ ಕರೆಸಿಕೊಳ್ಳಲಾಯಿತು. ಟೀಸ್ತಾ ಸೆಟಲ್ವಾಡ್‌ರವರ ‘ಹ್ಯಾಂಡ್ ಬುಕ್ ಆನ್ ಹಿಸ್ಟ್ರಿ ಫಾರ್ ಟೀಚರ್ಸ್‌’ ಪುಸ್ತಕದಲ್ಲಿ ಈ ವಾಸ್ತವವನ್ನು ಒತ್ತಿ ಹೇಳಲಾಗಿದೆ.
ಇಂದು ಬಿಜೆಪಿ ಮತ್ತು ಬ್ರಾಹ್ಮಣ್ಯವಾದಿ ಶಕ್ತಿಗಳು ಶಿವಾಜಿಯನ್ನು ಬ್ರಾಹ್ಮಣರು ಮತ್ತು ಗೋವಿನ ಆರಾಧಕನ ರೂಪದಲ್ಲಿ ಪ್ರಸ್ತುತಪಡಿಸಲು ಬಯಸುತ್ತಿರುವಾಗ, ಮೇಲ್ಜಾತಿಯಲ್ಲದವರ ಮೇಲೆ ಅವರ ಈ ವ್ಯಕ್ತಿತ್ವ ಪ್ರಭಾವ ಬೀರುತ್ತಿಲ್ಲ. ಜ್ಯೋತಿ ರಾವ್ ಫುಲೆ, ಶಿವಾಜಿಯ ಕುರಿತು ರಚಿಸಿದ್ದ ಒಂದು ಪೊವಡಾ(ಗೀತೆ) ಇದೇ ವಿಚಾರದ ಕುರಿತು ಕೇಂದ್ರೀಕೃತವಾಗಿತ್ತು. ಇಂದು ಶಿವಾಜಿಯ ವಿಚಾರದಲ್ಲಿ ಹಿಂದೂ ರಾಷ್ಟ್ರೀಯವಾದಿಗಳ ಯೋಜನೆಯನ್ನು ದಲಿತ-ಬಹುಜನರು ಸ್ವೀಕರಿಸಲು ಸಿದ್ಧರಿಲ್ಲ.

ಬಿಜೆಪಿಯ ಜಯ ಭಗವಾನ್ ಸಿಂಗ್ ಗೋಯಲ್ ಮತ್ತು ಅವರಂತಹ ಇತರರು ಈ ರೀತಿಯ ಪ್ರಯತ್ನಗಳ ಮೂಲಕ ಎರಡು ಸಂದೇಶಗಳನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಒಂದೆಡೆ ಅವರು ಶಿವಾಜಿಗೆ ಮುಸ್ಲಿಮ್ ವಿರೋಧಿ ಮತ್ತು ಬ್ರಾಹ್ಮಣ್ಯದ ಬಣ್ಣ ಬಳಿಯಲು ಬಯಸುತ್ತಿದ್ದಾರೆ. ಜೊತೆಗೆ ಶಿವಾಜಿಯ ಹೋಲಿಕೆಯನ್ನು ನರೇಂದ್ರ ಮೋದಿಯೊಂದಿಗೆ ಮಾಡಿ, ಮೋದಿಯೂ ಇದೇ ರೀತಿ ಮಾಡುತ್ತಿದ್ದಾರೆ ಎಂಬ ಸಂದೇಶವನ್ನೂ ನೀಡಲು ಅವರು ಬಯಸುತ್ತಿದ್ದಾರೆ. ಈ ಆಟವನ್ನು ಚೆನ್ನಾಗಿ ಅರಿತಿರುವ ಬಿಜೆಪಿಯೇತರ ಶಕ್ತಿಗಳು, ಜ್ಯೋತಿ ರಾವ್ ಫುಲೆ ಮುಂತಾದವರು ಏನು ಪ್ರಸ್ತುತ ಪಡಿಸಿದ್ದರೋ ಹಾಗೂ ದಲಿತ-ಬಹುಜನರ ಹಕ್ಕುಗಳಿಗಾಗಿ ಹೋರಾಡಲು ಅದನ್ನು ಸರಿ ಎಂದು ಭಾವಿಸುತ್ತಿದ್ದಾರೆಯೋ, ಶಿವಾಜಿಯ ಅದೇ ವ್ಯಕ್ತಿತ್ವವನ್ನು ಪ್ರಸ್ತುತಪಡಿಸಲು ಅವರು ಅಪೇಕ್ಷಿಸುತ್ತಿದ್ದಾರೆ. ಬಿಜೆಪಿ ಪಡೆಯ ಈ ಆಟವನ್ನು ಚೆನ್ನಾಗಿ ತಿಳಿದುಕೊಂಡಿರುವ ಬಿಜೆಪಿಯೇತರ ಪಡೆಗಳು, ಜೋತಿರಾವ್ ಫುಲೆಯಂತಹವರು ಪ್ರತಿಪಾದಿಸಿರುವ ಮತ್ತು ಇಂದು ದಲಿತ-ಬಹುಜನರ ಹಕ್ಕುಗಳ ಪರ ನಿಂತಿರುವವರು ಎತ್ತಿಹಿಡಿದಿರುವ ಶಿವಾಜಿಯ ಇನ್ನೊಂದು ಮುಖವನ್ನು ಪ್ರಚುರಪಡಿಸಲು ಮುಂದಾಗಿದ್ದಾರೆ. ಸದ್ಯ ಹಿಂಪಡೆಯಲಾಗಿರುವ ಪುಸ್ತಕವನ್ನು ಎರಡು ಕಾರಣಗಳಿಗಾಗಿ ಟೀಕಿಸಲಾಗಿದೆ. ಒಂದು, ಶಿವಾಜಿ ಕೃಷಿಕರ ಕಲ್ಯಾಣದ ಕುರಿತು ಕಾಳಜಿ ಹೊಂದಿದ್ದರು ಮತ್ತು ಎರಡು, ಆತ ಎಲ್ಲಾ ಧರ್ಮಗಳ ಜನರನ್ನು ಗೌರವಿಸುತ್ತಿದ್ದರು.