ಮಂಗಳೂರು : ‘ಜಿಮ್ಮೀಸ್’ ಸೂಪರ್ ಮಾರ್ಕೆಟ್ ಮಾಲಕ ಹಾಗೂ ಸ್ನೇಹಿತನ ವಿರುದ್ಧ ವಿಚಾರವಾದಿ ನರೇಂದ್ರ ನಾಯಕ್ ದೂರು

Prasthutha|

► ಡಾ. ಕಕ್ಕಿಲಾಯ ಪ್ರಕರಣದ ಬಳಿಕ ನಿಂದನಾತ್ಮಕ ಆಡಿಯೋ ವೈರಲ್ ಆದ ಘಟನೆ

- Advertisement -

ಮಂಗಳೂರು: ನಗರದ ಕದ್ರಿಯ ನಂತೂರು ರಸ್ತೆಯಲ್ಲಿರುವ ಜಿಮ್ಮಿ ಸೂಪರ್ ಸ್ಟೋರ್ ಮಾಲೀಕ ಹಾಗೂ ಮತ್ತೋರ್ವನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ನರೇಂದ್ರ ನಾಯಕ್ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಮಾಸ್ಕ್’ ಪ್ರಕರಣ ಸಂಬಂಧ ಮಂಗಳೂರಿನ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹಾಗೂ ಸಾಮಾಜಿಕ ಕಾರ್ಯಕರ್ತ ನರೇಂದ್ರ ನಾಯಕ್ ಅವರನ್ನು ಆಡಿಯೋವೊಂದರಲ್ಲಿ ನಿಂದನೆ ಮಾಡಲಾಗಿತ್ತು. ಆಡಿಯೋ ಕುರಿತು ದೂರು ನೀಡಿರುವ ನಾಯಕ್ ಅವರು, ಜಾಲತಾಣಗಳಲ್ಲಿ ಇಂತಹ ಪ್ರಚೋದನಕಾರಿ ಸಂದೇಶ ರವಾನಿಸುವ ಮೂಲಕ ತನ್ನ ಮೇಲೆ ದ್ವೇಷ ಸಾಧನೆಗೆ ಆರೋಪಿಗಳು ಮುಂದಾಗಿದ್ದಾಗಿ ದೂರಿದ್ದಾರೆ. ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲದಿದ್ದರೂ ತನ್ನ ಹೆಸರನ್ನ ಉಲ್ಲೇಖಿಸಿರುವುದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನ ಒತ್ತಾಯಿಸಿದ್ದಾರೆ.

- Advertisement -

ಎರಡು ದಿನಗಳ ಹಿಂದೆ ಮಾಸ್ಕ್ ಧರಿಸದಿರುವ ವಿಚಾರವಾಗಿ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹಾಗೂ ಜಿಮ್ಮಿ ಸೂಪರ್ ಸ್ಟೋರ್ ಮಾಲಿಕ ನಡುವೆ ವಾಗ್ವಾದ ನಡೆದಿತ್ತು. ತದನಂತರ ಸ್ಟೋರ್ ನ ಸಿಸಿಟಿವಿಯಲ್ಲಿ ದಾಖಲಾಗಿದ್ದ ವಾಗ್ವಾದದ ವೀಡಿಯೋವನ್ನ ಹರಿಯಬಿಡಲಾಗಿತ್ತು. ಬಳಿಕ ಸ್ಟೋರ್ ಮಾಲಕ ರಯಾನ್ ರೊಸಾರಿಯೋ ನೀಡಿದ ದೂರಿನಂತೆ ಡಾ.ಕಕ್ಕಿಲ್ಲಾಯ ವಿರುದ್ಧ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಈ ಬಗ್ಗೆ ಸೂಪರ್ ಮಾರ್ಕೆಟ್ ಮಾಲೀಕರಿಗೆ ಅವರ ಪರಿಚಯದ ವ್ಯಕ್ತಿ ದೂರವಾಣಿ ಕರೆ ಮಾಡಿ ಈ ಬಗ್ಗೆ ಮಾತನಾಡುತ್ತಾ ವೈದ್ಯ ಹಾಗೂ ವಿಚಾರವಾದಿ ನರೇಂದ್ರ ನಾಯಕ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆಡಿಯೋ ವೈರಲ್ ಆಗಿದೆ. ಈ ಕುರಿತು ನರೇಂದ್ರ ನಾಯಕ್ ಅವರು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Join Whatsapp