ಲವ್ ಯು ಜಿಂದಗಿ ಹಾಡಿಗೆ ತಲೆಯಾಡಿಸಿದ್ದ ಯುವತಿ ಕೋವಿಡ್‌ಗೆ ಬಲಿ

Prasthutha|

ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೋವಿಡ್ ವಾರ್ಡ್‌ನೊಳಗೆ ಲವ್ ಯು ಜಿಂದಗಿ ಹಾಡಿಗೆ ತಲೆಯಾಡಿಸಿ, ಕ್ಯಾಮೆರಾಗೆ ಕೈ ಬೀಸಿ ಹಾಯ್‌ ಎಂದಿದ್ದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

- Advertisement -

ಆಕ್ಸಿಜನ್ ಮಾಸ್ಕ್ ಧರಿಸಿ, ಡಿಯರ್ ಜಿಂದಗಿ ಚಿತ್ರದ ಹಾಡು ಲವ್ ಯೂ ಜಿಂದಗಿ ಹಾಡಿಗೆ ತಲೆಯಾಡಿಸಿದ್ದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲವು ಈಕೆ ಗುಣಮುಖಳಾಗಿ ಬರಲು ಹಾರೈಸಿದ್ದರು. ಆದರೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಾ.ಮೋನಿಕಾ ಲಂಗೆಹ್,“ನನ್ನನ್ನು ಕ್ಷಮಿಸಿ. ನಾವು ಗಟ್ಟಿಗಿತ್ತಿಯನ್ನು ಕಳೆದುಕೊಂಡಿದ್ದೇವೆ” ಎಂದು ಅತ್ಯಂತ ದುಃಖತಪ್ತರಾಗಿ ಹೇಳಿದ್ದಾರೆ.

- Advertisement -

ಈ ಯುವತಿಯ ವಯಸ್ಸು 30ವರ್ಷ. ಕಳೆದ 10 ದಿನಗಳಿಂದ ಆಕೆಗೆ ಐಸಿಯು ಬೆಡ್ ಸಿಗದ ಕಾರಣ ಕೊವಿಡ್ ಎಮರ್ಜೆನ್ಸಿ ವಿಭಾಗದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇವಲ ಆಕ್ಸಿಜನ್ ಸಹಾಯ ಪಡೆದಿರುವ ಈಕೆಗೆ ರೆಮ್​ಡಿಸಿವಿರ್​ ಹಾಗೂ ಪ್ಲಾಸ್ಮಾ ಚಿಕಿತ್ಸೆ ಸೇರಿದಂತೆ ಕೆಲ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಎಲ್ಲಕ್ಕೂ ಮಿಗಿಲಾಗಿ ಈಕೆ ಗಟ್ಟಿಗಿತ್ತಿ. ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು ಎನ್ನುವುದಕ್ಕೆ ಈಕೆಯೇ ಉದಾಹರಣೆ. ಈ ಧೈರ್ಯವಂತ ಯುವತಿಗಾಗಿ ಪ್ರಾರ್ಥಿಸಿ, ಆಕೆಗಾಗಿ ಪುಟ್ಟ ಮಗು ಮನೆಯಲ್ಲಿ ಕಾಯುತ್ತಿದೆ ಎಂದು ವೈದ್ಯರು ಹೇಳಿದ್ದರು.

ದೇಶದಲ್ಲಿ ಕೆಲವು ವಾರಗಳಿಂದ ಅಟ್ಟಹಾಸ ಮೆರೆಯುತ್ತಿರುವ ಕೊರೋನಾದಿಂದ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವರದಿಯಾಗುತ್ತಿದೆ.

Join Whatsapp