ಬ್ಯಾಂಕ್ ಗ್ರಾಹಕರನ್ನು ಆನ್ ಲೈನ್ ಮೋಸದಿಂದ ರಕ್ಷಿಸಲು SBI ಹೊಸ ತಂತ್ರ

Prasthutha|

ಹೊಸದಿಲ್ಲಿ: ಬ್ಯಾಂಕ್ ಗ್ರಾಹರಿಗೆ ಆಗುತ್ತಿರುವ ಆನ್ ಲೈನ್ ಮೋಸಗಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ, ತನ್ನ ಗ್ರಾಹಕರ ಸುರಕ್ಷತೆಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಹೊಸ ನಿಯಮನ್ನು ಪರಿಚಯಿಸುತ್ತಿದೆ.

- Advertisement -

ಈ ನಿಯಮದ ಪ್ರಕಾರ, ಇನ್ನು ಮುಂದೆ ಎಸ್ ಬಿ ಐ ಬ್ಯಾಂಕ್ ಗ್ರಾಹಕರು ಯಾವುದೇ ಎಟಿಎಂನಿಂದ 10 ಸಾವಿರಕ್ಕಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡಬೇಕಾದರೆ, ತಮ್ಮ ಬ್ಯಾಂಕ್ ಖಾತೆಯೊಂದಿಗೆ ಜೋಡಿಸಿರುವ ಮೊಬೈಲ್ ಅನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕಿದೆ. 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಎಟಿಎಂ ನಿಂದ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಎಸ್ ಬಿ ಐ ನಿಮ್ಮ ಮೊಬೈಲ್ ಗೆ OTP (ವನ್ ಟೈಂ ಪಾಸ್ವರ್ಡ) ನ್ನು ಕಳುಹಿಸುತ್ತದೆ. ಆ OTP ಯನ್ನು ATM ಯಂತ್ರದಲ್ಲಿ ನಮೂದಿಸಿದ ನಂತರ ನಿಮ್ಮ ಹಣವನ್ನು ವಿತ್ ಡ್ರಾ ಮಾಡಿಕೊಳ್ಳ ಬಹುದಾಗಿದೆ.

ಕಳೆದ ಜನವರಿಯಿಂದ ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ಚಾಲ್ತಿಯಲ್ಲಿದ್ದ ಈ ವ್ಯವಸ್ಥೆಯು ನಾಳೆ ಸೆ. 18 ರಿಂದ 24×7 ಲಭ್ಯವಾಗಲಿದೆ.



Join Whatsapp