ಬೆಂಗಳೂರು ಗಲಭೆ | ನಾಗರಿಕ ಗುಂಪುಗಳಿಂದ ಸತ್ಯಶೋಧನಾ ವರದಿ | ಪೊಲೀಸರ ವಿಳಂಬ ನೀತಿಯೇ ಹಿಂಸೆಗೆ ಕಾರಣ

Prasthutha|

ಬೆಂಗಳೂರು : ಆ.11ರಂದು ನಡೆದ ಬೆಂಗಳೂರು ಗಲಭೆಗೆ ಸಂಬಂಧಿಸಿದ ನಾಗರಿಕ ಗುಂಪುಗಳು ನಡೆಸಿದ ಸತ್ಯಶೋಧನಾ ವರದಿ ಬಹಿರಂಗವಾಗಿದೆ. ವರದಿಯ ಪ್ರಕಾರ, ಘಟನೆಯನ್ನು ಕೋಮು ಗಲಭೆ ಎನ್ನಲು ಬೇಕಾಗುವಷ್ಟು ಸಾಕ್ಷ್ಯಗಳಿಲ್ಲ, ಆದರೆ ದೂರು ದಾಖಲಿಸಲು ಬಂದಾಗ ತ್ವರಿತ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲವಾದುದು ಗಲಭೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

- Advertisement -

ಬೆಂಗಳೂರಿನ ಸಿವಿಲ್ ಸೊಸೈಟಿ ಸಂಘಟನೆಗಳ ಸದಸ್ಯರು ಈ ವರದಿ ಸಿದ್ಧಪಡಿಸಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ರಾಜ್ಯಾಧ್ಯಕ್ಷರಾದ ನೈನಾ ನಾಯಕ್, ಸ್ವತಂತ್ರ ಪತ್ರಕರ್ತ ಸಿಂಥಿಯಾ ಸ್ಟೀಫನ್ ಮತ್ತಿತರ 21 ಮಂದಿ ಈ ಸತ್ಯಶೋಧನಾ ತಂಡದಲ್ಲಿದ್ದರು.

ಕೆಲವು ದಿನಗಳ ಹಿಂದೆ ‘ಸಿಟಿಝನ್ಸ್ ಫಾರ್ ಡೆಮಾಕ್ರಸಿ’ ಎಂಬ ಸಂಘಟನೆಯು ಒಂದು ವರದಿಯನ್ನು ಸಿದ್ಧಪಡಿಸಿದ್ದು, ಆ ವರದಿಯಲ್ಲಿ ಘಟನೆಯು ಕೋಮು ಗಲಭೆಯಾಗಿದ್ದು, ಹಿಂದೂ ಸಮುದಾಯ ವಾಸಿಸುವ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗಿತ್ತು. ರಾಜ್ಯ ಸಚಿವ ಸಿ.ಟಿ. ರವಿಯವರು ನೇಮಿಸಿದ ಸಮಿತಿ ಇದಾಗಿತ್ತು. ಸಮಿತಿಯ ಕಚೇರಿ ವಿಳಾಸ ಆರೆಸ್ಸೆಸ್ ಬೆಂಬಲಿತ ಮ್ಯಾಗಝಿನ್ ‘ವಿಕ್ರಮ’ದ ಕಚೇರಿಯದ್ದಾಗಿತ್ತು.

- Advertisement -

ಗಲಭೆಯ ವೇಳೆ ಹಿಂದೂಗಳನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಿರಲಿಲ್ಲ. ಹಲವಾರು ಮುಸ್ಲಿಮ್ ಯುವಕರು ಹಿಂದೂ ಕುಟುಂಬಗಳು ಮತ್ತು ಕ್ರೈಸ್ತ ಕುಟುಂಬಗಳಿಗೆ ರಕ್ಷಣೆ ನೀಡಿದ ಬಗ್ಗೆ ವರದಿಗಳಾಗಿವೆ. ಹಿಂದೂ, ಕ್ರೈಸ್ತರ ವಾಹನ, ಆಸ್ತಿಗಳನ್ನೂ ಮುಸ್ಲಿಮ್ ಯುವಕರು ರಕ್ಷಿಸಿದ್ದರು. ಹನುಮಂತ ದೇವಸ್ಥಾನ ರಕ್ಷಿಸಲು ಮುಸ್ಲಿಮ್ ಯುವಕರು ಮಾನವ ಸರಪಳಿ ರಚಿಸಿದ್ದರು. ಮುಸ್ಲಿಮರಿಗೆ ಸೇರಿದ ವಾಹನಗಳು, ಆಸ್ತಿಗಳಿಗೂ ಸಾಕಷ್ಟು ಹಾನಿಗಳಾಗಿವೆ. ಹೀಗಾಗಿ ಇದು ಹಿಂದೂಗಳನ್ನು ಗುರಿಯಾಗಿಸಿ ನಡೆದ ಹಿಂಸಾಚಾರವಲ್ಲ, ಪೂರ್ವ ಯೋಜಿತ ಹಿಂಸಾಚಾರವೂ ಅಲ್ಲ ಎಂದು ಸಿವಿಲ್ ಸೊಸೈಟಿ ಸಂಘಟನೆಗಳ ವರದಿಯಲ್ಲಿ ತಿಳಿಸಲಾಗಿದೆ.



Join Whatsapp