ಆತ್ಮಾಭಿಮಾನ ಮತ್ತು ಆತ್ಮ ನಿಂದನೆ

0
59

-ಅರ್ಶದ್ ಮುಹಮ್ಮದ್ ನದ್ವಿ

ಅಲ್ಲಾಹನಿಂದ ಮಾರ್ಗನಿರ್ದೇಶನ ಸ್ವೀಕರಿಸುವ ಮತ್ತು ಸ್ವೀಕರಿಸದ ಮಂದಿಯ ಭೌತಿಕ ಜೀವನರಂಗದ ಎರಡು ಚಿತ್ರಗಳನ್ನು ಅಲ್ಲಾಹನು ತೆರೆದು ತೋರಿಸುವನು. ಅಲ್ಲಾಹನಿಗೆ ವಿಧೇಯತೆ ತೋರದವನು ಇನ್ನೊಬ್ಬರ ಒತ್ತಡ ಮತ್ತು ನಿಯಂತ್ರಣದಿಂದ ಜೀವಿಸುತ್ತಿರುತ್ತಾರೆ. ಸ್ವಾತಂತ್ರವಿಲ್ಲದ ಗುಲಾಮನಂತೆ ಇತರರನ್ನು ಆಶ್ರಯಿಸದೆ ಆತನಿಗೆ ಮುಂದಕ್ಕೆ ಹೆಜ್ಜೆ ಹಾಕಲಾರದು.

ಅಲ್ಲಾಹನು, ಒಂದು ಉದಾಹರಣೆಯನ್ನು ನೀಡುತ್ತಾನೆ; ಒಬ್ಬನು (ಯಾರ ಅಧಿಕಾರವಿಲ್ಲದಗುಟ್ಟಾಗಿಯೂ ಬಹಿರಂಗವಾಗಿಯೂ (ಸತ್ಕಾರ್ಯಕ್ಕೆ) ವೆಚ್ಚ ಮಾಡುತ್ತಾನೆ. ದೋ) ಮಾಲಕತ್ವದಲ್ಲಿರುವಅವರೇನು ಸಮಾನರೇ?  ದಾಸನಾಗಿದ್ದಾನೆ ಹಾಗೂ ಇನ್ನೊಬ್ಬನಿಗೆ ನಾವು ಉತ್ತಮ ಸಂಪತ್ತನ್ನು ದಯಪಾಲಿಸಿದ್ದು, ಅವನು ಅದರಿಂದ ಪ್ರಶಂಸೆಗಳು ಅಲ್ಲಾಹನಿಗೆ. ಆದರೆ ಅವರಲ್ಲಿ ಹೆಚ್ಚಿನವರು ಅರಿತಿಲ್ಲ.(16:75)

ಅಲ್ಲಾಹನಿಂದ ಮಾರ್ಗನಿರ್ದೇಶನ ಸ್ವೀಕರಿಸುವ ಮತ್ತು ಸ್ವೀಕರಿಸದ ಮಂದಿಯ ಭೌತಿಕ ಜೀವನರಂಗದ ಎರಡು ಚಿತ್ರಗಳನ್ನು ಅಲ್ಲಾಹನು ತೆರೆದು ತೋರಿಸುವನು. ಅಲ್ಲಾಹನಿಗೆ ವಿಧೇಯತೆ ತೋರದವನು ಇನ್ನೊಬ್ಬರ ಒತ್ತಡ ಮತ್ತು ನಿಯಂತ್ರಣದಿಂದ ಜೀವಿಸುತ್ತಿರುತ್ತಾರೆ. ಸ್ವಾತಂತ್ರವಿಲ್ಲದ ಗುಲಾಮನಂತೆ ಇತರರನ್ನು ಆಶ್ರಯಿಸದೆ ಆತನಿಗೆ ಮುಂದಕ್ಕೆ ಹೆಜ್ಜೆ ಹಾಕಲಾರದು.
ಆದರೆ ಅಲ್ಲಾಹನಿಗೆ ವಿಧೇಯತೆ ತೋರುವವನು ಇನ್ನಿತರ ಎಲ್ಲಾ ರೀತಿಯ ಗುಲಾಮಗಿರಿಯಿಂದ ಹೊರತಾಗುವನು. ಆತನ ಮುಂದೆ ತಡೆಗೋಡೆಗಳಿಲ್ಲ. ಅವನು ಬದುಕನ್ನು ನಡೆಸಲು ಶ್ರಮ ಜೀವನ ನಡೆಸಿ ಸ್ವಯಂ ಪರ್ಯಾಪ್ತವನ್ನು ಪಡೆದು ಸಮಾಜದ ಬಡಬಗ್ಗರಿಗಾಗಿ ಗುಪ್ತವಾಗಿಯೂ ಬಹಿರಂಗವಾಗಿಯೂ ಧನವನ್ನು ವಿನಿಯೋಗಿಸುವನು.
ಇತರರನ್ನು ಆಶ್ರಯಿಸುವವನು ಅವರಿಂದ ತನಗೆ ಲಭಿಸುವ ಔದರ್ಯವನ್ನು ನಿರೀಕ್ಷಿಸಿ ಪರಿಮಿತವಾದ ತನ್ನ ಹಕ್ಕುಗಳ ಕುರಿತು ಚಿಂತೆ ಮಾಡುತ್ತಾ ಜೀವಿಸುವನು.
ಸ್ವಯಂ ಪರ್ಯಾಪ್ತ ಹೊಂದಿದಾತ ಏನು ಲಭಿಸುತ್ತದೆ ಎಂದು ಚಿಂತಿಸದೆ ತಾನು ಇತರರಿಗೆ ಏನನ್ನು ಮಾಡಲು ಸಾಧ್ಯವಾಗಬಹುದು ಎಂದರಿತು ಆ ಬಗ್ಗೆ ಚಿಂತನೆ ನಡೆಸುವನು.
ಪ್ರವಾದಿ(ಸ) ಹೇಳಿದರು: ಮೇಲಿರುವ ಕೈಗಳು ಕೆಳಗಿರುವ ಕೈಗಳಿಗಿಂತ ಉತ್ತಮವಾದುದು. ನಿಮ್ಮನ್ನು ಆಶ್ರಯಿಸುವ ಮಂದಿಗೆ ದಾನ ಮಾಡಿರಿ. ಧನ್ಯನಾಗಿರುವ ವೇಳೆ ಮಾಡುವ ದಾನವು ಉತ್ತಮವಾದ ದಾನವಾಗಿದೆ. ಯಾರಾದರೂ ಆತ್ಮಾಭಿಮಾನವನ್ನು ಬೇಡಿದರೆ ಅಲ್ಲಾಹನು ಆತನಿಗೆ ಆತ್ಮಾಭಿಮಾನವನ್ನು ನೀಡುವನು. ಧನ್ಯತೆಯನ್ನು ಆತ ಬೇಡಿದರೆ ಅಲ್ಲಾಹನು ಆತನಿಗೆ ಧನ್ಯತೆಯನ್ನು ನೀಡುವನು. (ಬುಖಾರಿ)