ಭಾರತದ ಪೌರತ್ವ ಕೊಡುಗೆಯನ್ನು ತಿರಸ್ಕರಿಸಿದ ಪಾಕಿಸ್ತಾನಿ ಹಿಂದೂಗಳು

0
259

ಕರಾಚಿ: ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯವು ಹೊಸ ಕಾನೂನಿನಡಿಯಲ್ಲಿ ಅವರಿಗೆ ಪೌರತ್ವ ನೀಡುವ ಭಾರತದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
‘‘ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಈ ಕಾನೂನನ್ನು ಪಾಕಿಸ್ತಾನದ ಹಿಂದೂ ಸಮುದಾಯವು ಸರ್ವಾನುಮತದಿಂದ ತಿರಸ್ಕರಿಸುತ್ತದೆ. ಇದು ಪಾಕಿಸ್ತಾನದ ಇಡೀ ಹಿಂದೂ ಸಮುದಾಯದಿಂದ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರ್ವಾನುಮತದ ಸಂದೇಶವಾಗಿದೆ’’ ಎಂದು ಪಾಕಿಸ್ತಾನ ಹಿಂದೂ ಪರಿಷತ್ತಿನ ಪೋಷಕ ರಾಜಾ ಅಸರ್ ಮಂಗ್ಲಾನಿ ಹೇಳಿದ್ದಾರೆ.
‘‘ಈ ಕಾನೂನು ಧಾರ್ಮಿಕ ಸಮುದಾಯಗಳನ್ನು ಪರಸ್ಪರ ವಿಭಜಿಸಲು ಪ್ರಯತ್ನಿಸುತ್ತದೆ. ಇದು ಮೂಲಭೂತ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಾವು ಅದನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ’’ ಎಂದು ಪಾಕಿಸ್ತಾನದ ಸಂಸತ್ತಿನ ಮೇಲ್ಮನೆ ಸದಸ್ಯ ಅನ್ವರ್ ಲಾಲ್ ಡೀನ್ ಹೇಳಿದ್ದಾರೆ.
ಪಾಕಿಸ್ತಾನದ ಸಿಖ್ಖ್ ಸಮುದಾಯವು ಕೂಡಾ ಈ ವಿವಾದಾತ್ಮಕ ಕಾನೂನನ್ನು ಖಂಡಿಸಿದೆ. ‘‘ಪಾಕಿಸ್ತಾನಿ ಸಿಖ್ಖರು ಮಾತ್ರವಲ್ಲದೆ, ಭಾರತ ಸೇರಿದಂತೆ ವಿಶ್ವದ ಇಡೀ ಸಿಖ್ ಸಮುದಾಯವು ಈ ಕ್ರಮವನ್ನು ಖಂಡಿಸುತ್ತದೆ’’ ಎಂದು ಬಾಬಾ ಗುರುನಾನಕ್ ನಾಯಕ ಗೋಪಾಲ್ ಸಿಂಗ್ ಹೇಳಿದ್ದಾರೆ.