ಜೈಲಿನಲ್ಲಿರುವ ಕ್ಯಾಂಪಸ್ ಫ್ರಂಟ್ ನಾಯಕ ರೌಫ್ ಶರೀಫ್ ಗೆ ಕೋವಿಡ್ ಪಾಸಿಟಿವ್ | ಚಿಕಿತ್ಸೆಗಾಗಿ ಆಗ್ರಹಿಸಿ ಪತ್ನಿಯಿಂದ ಕೇರಳ ಮುಖ್ಯಮಂತ್ರಿಗೆ ಪತ್ರ

Prasthutha|

►ಹಥ್ರಾಸ್ ಪಿತೂರಿ ಆರೋಪದಲ್ಲಿ ಬಂಧನ

- Advertisement -

ಮಥುರಾ : ಮಥುರಾ ಜೈಲಿನಲ್ಲಿ ಬಂಧಿಯಾಗಿರುವ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ನಾಯಕ ರೌಫ್ ಶರೀಫ್ ಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಮಥುರಾ ಜೈಲು ಈಗ ಉತ್ತರ ಪ್ರದೇಶ ಕೋವಿಡ್ ಹಾಟ್ ಸ್ಪಾಟ್ ಆಗಿದ್ದು, ಸದ್ಯ ಅಲ್ಲಿ 500ಕ್ಕೂ ಹೆಚ್ಚು ಕೋವಿಡ್ ರೋಗಿಗಳಿದ್ದಾರೆ. ಹಥ್ರಾಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟಿದ್ದ ಕೇರಳ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಕೂಡ ಇದೇ ಜೈಲಿನಲ್ಲಿದ್ದರು. ರೌಫ್ ಶರೀಫ್ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೌಫ್ ಪತ್ನಿ ಬತೂಲ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ, “ ನನ್ನ ಪತಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಹಥ್ರಾಸ್ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ನನ್ನ ಪತಿಯನ್ನು ಸೇರಿಸಲಾಗಿದೆ” ಎಂದವರು ಹೇಳಿದ್ದಾರೆ.

ರೌಫ್ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಡಿಸಂಬರ್ ನಲ್ಲಿ ಅವರನ್ನು ಕೇರಳ ಈಡಿ ಅಧಿಕಾರಿಗಳು ಬಂಧಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ದೊರೆತಿದೆ. ಆದರೆ ಆ ಬಳಿಕ ಉತ್ತರ ಪ್ರದೇಶ STF ಅಧಿಕಾರಿಗಳು ಹಥ್ರಾಸ್ ಅತ್ಯಾಚಾರ ಪ್ರಕರಣದ ಸಮಯದಲ್ಲಿ ಗಲಭೆ ನಡೆಸಲು ಪಿತೂರಿ ಹೂಡಿದ್ದಾರೆಂಬ ಆರೋಪ ಹೊರಿಸಿ ರೌಫ್ ಅವರನ್ನು ಬಂಧಿಸಿ ಮಥುರಾ ಜೈಲಿನಲ್ಲಿಟ್ಟಿದ್ದರು.  

- Advertisement -

ಕುಟುಂಬದವರು ಆರೋಪಿಸುವಂತೆ ಇದೀಗ ಜೈಲಿನಲ್ಲಿ ರೌಫ್ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಮಾತ್ರವಲ್ಲ ಜೈಲಿನಲ್ಲಿ ಸರಿಯಾದ ಆಹಾರ ಕೂಡಾ ದೊರೆಯುತ್ತಿಲ್ಲ.  ಜೈಲಿನಲ್ಲಿ ರೌಫ್ ಅವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಿದ್ದು, ಕೋವಿಡ್ ವರದಿಯಾದ ಮೇಲೂ ನೆಲದ ಮೇಲೆಯೇ ಮಲಗಿಸಲಾಗುತ್ತಿದೆ ಎನ್ನಲಾಗಿದೆ. ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಎರಡು ತಿಂಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಪತ್ನಿ ಬತೂಲ್ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲು ನಡೆಸಿದ ಪ್ರಯತ್ನ ಕೂಡಾ ವಿಫಲಗೊಂಡಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.



Join Whatsapp