ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ಸಭೆಯು ಕ್ಷೇತ್ರ ಅಧ್ಯಕ್ಷರಾದ ಬಶೀರ್ ಎಸ್ .ಎಮ್ ಇವರ ಅಧ್ಯಕ್ಷತೆಯಲ್ಲಿ ಕಲ್ಲಾಪು ಯೂನಿಟಿ ಸಭಾಂಗಣದಲ್ಲಿ ನಡೆಯಿತು.
ಪ್ರತೀ ಮೂರು ವರ್ಷಗಳಿಗೆ ನಡೆಯುವ ಆಂತರಿಕ ಚುನಾವಣೆಯಲ್ಲಿ ನೂತ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಎಸ್ಡಿಪಿಐ ಉಳ್ಳಾಲ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಬಶೀರ್ ಎಸ್.ಎಮ್, ಉಪಾಧ್ಯಕ್ಷರಾಗಿ ನಝೀರ್ ಫರಂಗಿಪೇಟೆ, ಕಾರ್ಯದರ್ಶಿಯಾಗಿ ಹನೀಫ್ ರಂತಡ್ಕ, ಜೊತೆ ಕಾರ್ಯದರ್ಶಿಗಳಾಗಿ ಉಬೈದ್ ಅಮ್ಮೆಂಬಳ ಹಾಗೂ ಅಶ್ರಫ್ ಮಂಚಿ, ಕೋಶಾಧಿಕಾರಿಯಾಗಿ ಫಾರೂಕ್ ಝಲ್ ಝಲ್ ರವರು ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಅಬ್ಬಾಸ್ ಎ. ಆರ್, ಶಹೀದ್ ಕಿನ್ಯ, ಅಬ್ದುಲ್ ಲತೀಫ್ ಕಲ್ಲಾಪು, ಆಸೀಫ್ ಕೇಸಿರೋಡ್, ಜುನೈದ್ RKC, ಅರೀಫ್ ಬೋಳಿಯಾರ್ ಆಯ್ಕೆಯಾದರು.
ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಧ್ವಜಾರೋಹಣದ ಮೂಲಕ ಸಭೆಗೆ ಚಾಲನೆ ನೀಡಿದರು. ನಂತರ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ರಿಯಾಜ್ ಫರಂಗಿಪೇಟೆ ಅವರು ನಾಯಕತ್ವದ ಕುರಿತು ತರಬೇತಿ ನಡೆಸಿಕೊಟ್ಟರು. ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಪ್ರಧಾನ ಕಾರ್ಯದರ್ಶಿಗಳಾದ ಜಮಾಲ್ ಜೋಕಟ್ಟೆ, ಅಶ್ರಫ್ ಅಡ್ಡೂರ್ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ರಾಜ್ಯ ಸಮಿತಿ ಸದಸ್ಯರಾದ ನವಾಜ್ ಉಳ್ಳಾಲ್, ಜಿಲ್ಲಾ ಕೋಶಾಧಿಕಾರಿ ಮೂಸಬ್ಬ ತುಂಬೆ, ಬಂಟ್ವಾಳ ಪುರಸಭೆ ಉಪ್ಪಾಧ್ಯಕ್ಷರಾದ ಮೂನಿಶ್ ಅಲಿ ಸೇರಿದಂತೆ ಕ್ಷೇತ್ರ, ಬ್ಲಾಕ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇತ್ತೀಚಿಗೆ ನಡೆದ ಪ್ರತಿಷ್ಠಿತ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೂನಿಶ್ ಅಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.