ಮತ್ತೆ ಹೀನಾಯ ಕಲೆಕ್ಷನ್ ಮಾಡಿದ ಅಕ್ಷಯ್ ಸಿನಿಮಾ

Prasthutha|

ನವದೆಹಲಿ: ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಸಿನಿಮಾ ಕೂಡ ಸೋಲುವ ಭಿತಿಯಲ್ಲಿ ಇದೆ.

- Advertisement -


ಅತ್ತ ‘ಸ್ತ್ರಿ 2’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರುವ ಸನಿಹದಲ್ಲಿ ಇದ್ದರೆ ಅಕ್ಷಯ್ ಕುಮಾರ್ ಚಿತ್ರ 15 ಕೋಟಿ ರೂಪಾಯಿ ಗಳಿಸಲು ಒದ್ದಾಡುತ್ತಿದೆ.


ಆಗಸ್ಟ್ 15ರ ಪ್ರಯುಕ್ತ ‘ಖೇಲ್ ಖೇಲ್ ಮೇ’ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 5 ಕೋಟಿ ರೂಪಾಯಿ. ಆ ಬಳಿಕ ಎರಡನೇ ದಿನ 2 ಕೋಟಿ ರೂಪಾಯಿ, ಮೂರನೇ ದಿನ 3.1 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 3.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 13.95 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ ನಾಲ್ಕು ದಿನಗಳಲ್ಲಿ 15 ಕೋಟಿ ತಲುಪೋದು ಕಷ್ಟ ಆಗಿದೆ ಅನ್ನೋದು ಬೇಸರದ ಸಂಗತಿ.

- Advertisement -

ಅಕ್ಷಯ್ ಕುಮಾರ್ ಅವರು ಪ್ರತಿ ಚಿತ್ರಕ್ಕೆ 50-60 ಕೋಟಿ ರೂಪಾಯಿ ಪಡೆಯುತ್ತಾರೆ. ಆದರೆ, ಅವರ ಸಿನಿಮಾ ಅಕ್ಷಯ್ ಕುಮಾರ್ ಸಂಭಾವನೆಯ ಅರ್ಧದಷ್ಟೂ ಗಳಿಕೆ ಮಾಡುತ್ತಿಲ್ಲ. ಈ ವರ್ಷ ರಿಲೀಸ್ ಆದ ಅವರ ನಟನೆಯ ಮೂರನೇ ಸಿನಿಮಾ ಇದು. ಈ ಚಿತ್ರವೂ ಸೋಲಿನ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದೆ. ಈ ಮೊದಲು ‘ಬಡೇ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’ ಸಿನಿಮಾಗಳು ರಿಲೀಸ್ ಆಗಿ ಸೋತಿವೆ.



Join Whatsapp