ನೋಡನೋಡುತ್ತಿದ್ದಂತೆ  ಬೆಂಕಿಗೆ ಆಹುತಿಯಾದ ತಾಜ್ ಎಕ್ಸ್ ಪ್ರೆಸ್ ರೈಲಿನ ನಾಲ್ಕು ಬೋಗಿಗಳು

Prasthutha|

ನವದೆಹಲಿ: ಆಗ್ನೇಯ ದೆಹಲಿಯ ಸರಿತಾ ವಿಹಾರ್‌ನಲ್ಲಿ  ತಾಜ್ ಎಕ್ಸ್ ಪ್ರೆಸ್ ರೈಲಿನ ನಾಲ್ಕು ಬೋಗಿಗಳು ನೋಡನೋಡುತ್ತಿದ್ದಂತೆ ಬೆಂಕಿಗೆ ಆಹುತಿಯಾಗಿದೆ.

- Advertisement -

4 ಗಂಟೆಗೆ ಅಗ್ನಿಶಾಮಕ ಸಂಸ್ಥೆಗೆ ದುರಂತದ ಕರೆ ಹೋಗಿದೆ. ತಾಜ್ ಎಕ್ಸ್ಪ್ರೆಸ್ ರೈಲಿನ ನಾಲ್ಕು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ದೊರೆತ ತಕ್ಷಣ ಎಂಟು ಅಗ್ನಿಶಾಮಕ ಟೆಂಡರ್ಗಳನ್ನು ಬೆಂಕಿಯನ್ನು ನಂದಿಸಲು ಕಳುಹಿಸಲಾಗಿದೆಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈವರೆಗೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡಾಗ ಪ್ರಯಾಣಿಕರು ಸರಪಳಿ ಎಳೆದು ರೈಲನ್ನು ನಿಲ್ಲಿಸಿ ತಮ್ಮ ಲಗೇಜುಗಳನ್ನು ಬಿಟ್ಟು ರೈಲಿನಿಂದ ಇಳಿದಿದ್ದಾರೆ. ಬೆಂಕಿ ಎಷ್ಟು ತೀವ್ರವಾಗಿತ್ತು ಎಂದರೆ 10 ನಿಮಿಷಗಳಲ್ಲಿ ರೈಲಿನ ಡಿ-2, ಡಿ-3 ಮತ್ತು ಡಿ-4 ಕೋಚ್‌ಗಳು ಹೊಗೆಯಿಂದ ತುಂಬಿ ಹೋಗಿವೆ. ಮೊದಲು ಉಪ ಸಿಟಿಐ ಝಾನ್ಸಿ ಪಿಯೂಷ್ ಹಯಾರನ್, ರೈಲಿನಲ್ಲಿ ಉಪಸ್ಥಿತರಿದ್ದ ಟಿಕೆಟ್ ತಪಾಸಣೆ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿಯ ತೀವ್ರತೆ ಅಷ್ಟು ಕಡಿಮೆಯಿರಲಿಲ್ಲ. ನಂತರ ಘಟನೆಯ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.



Join Whatsapp