ಹಾವೇರಿ: ಕಾಂಗ್ರೆಸ್’ನ ಐದು ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ಮನೆ ಒಡತಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಯಲ್ಲಿ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ. ಅದರಂತೆ ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಹಾವೇರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಫ್ರೀಜ್ ತೆಗೆದುಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಲತಾ ಎಂಬವವರು ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಯುಗಾದಿ ಹಬ್ಬಕ್ಕೆ ಹೊಸ ಫ್ರೀಜ್ವೊಂದನ್ನು ಖರೀದಿ ಮಾಡಿದ್ದಾರೆ. ಬರೊಬ್ಬರಿ 17,500 ರೂಪಾಯಿ ಕೊಟ್ಟು ಫ್ರೀಜ್ ಖರೀದಿಸುವ ಮೂಲಕ ಯುಗಾದಿ ಹಬ್ಬಕ್ಕೆ ಹೊಸ ವಸ್ತುವನ್ನ ಮನೆಗೆ ತಂದಿದ್ದಾರೆ. ಹಬ್ಬದಂದು ಮನೆಗೆ ಬಂದ ಪ್ರೀಜ್ಗೆ ಲತಾ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದರು.