ಭಾರತ ತೊರೆದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳು

Prasthutha|

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಮೂವರು ಭಾರತ ತೊರೆದಿದ್ದಾರೆ.

- Advertisement -


ಮುರುಗನ್, ರಾಬರ್ಟ್ ಪಯಸ್ ಹಾಗೂ ಜಯಕುಮಾರ್ ಅವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಗೆ ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್ 2022ರಲ್ಲಿ ಒಟ್ಟು ಆರು ಮಂದಿಯನ್ನು ಬಿಡುಗಡೆ ಮಾಡಿತ್ತು. ಅವರಲ್ಲಿ ಈ ಮೂವರು ಕೂಡ ಸೇರಿದ್ದಾರೆ. ಇವರು ಕೊಲಂಬೋಗೆ ತೆರಳಿದ್ದಾರೆ.


ಜೈಲಿನಿಂದ ಬಿಡುಗಡೆಯಾದ ನಂತರ ಅವರನ್ನು ಬಂಧಿಸಲಾಗಿದ್ದ ತಿರುಚಿರಾಪಳ್ಳಿಯ ವಿಶೇಷ ಶಿಬಿರದಿಂದ ಇಂದು ಮುಂಜಾನೆ ಪೊಲೀಸ್ ಅಧಿಕಾರಿಗಳ ತಂಡ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಲ್ಲಾ ಮೂವರು ಪುರುಷರನ್ನು ಕರೆದೊಯ್ಯಲಾಯಿತು. ಈ ಮೂವರು ಶ್ರೀಲಂಕಾ ಪ್ರಜೆಗಳು ಎಂದು ತಿಳಿದು ಬಂದಿದೆ.



Join Whatsapp