ಇಸ್ರೇಲ್‌‌ನ್ನು ಶಿಕ್ಷಿಸದೇ ಬಿಡುವುದಿಲ್ಲ: ಇರಾನ್‌ ಎಚ್ಚರಿಕೆ

Prasthutha|

ಟೆಹರಾನ್‌: ಇಸ್ರೇಲ್‌ ಅನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಡಮಾಸ್ಕಸ್‌ನಲ್ಲಿನ ತನ್ನ ರಾಯಭಾರ ಕಚೇರಿ ಮೇಲೆ ವೈಮಾನಿಕ ದಾಳಿ ನಡೆಸಿ ಏಳು ಮಂದಿ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್‌ ಜನರಲ್‌ ಸೇರಿ ಏಳು ಮಂದಿ ಗಾರ್ಡ್‌ಗಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಇರಾನ್‌ನ ಪರಮೋಚ್ಚ ನಾಯಕ ಅಯಾತ್‌ ಉಲ್ಲಾ ಅಲಿ ಖಮೇನಿ ಈ ಎಚ್ಚರಿಕೆ ನೀಡಿದ್ದಾರೆ.

- Advertisement -

ನಮ್ಮ ವೀರ ಸೇನಾನಿಗಳ ಕೈಯಿಂದ ದುಷ್ಟ ಜಿಯೋನಿಸ್ಟ್ ಆಡಳಿತವನ್ನು ಶಿಕ್ಷಿಸಲಾಗುವುದು. ಈ ಅಪರಾಧ ಮತ್ತು ಇತರ ಅಪರಾಧಗಳ ಬಗ್ಗೆ ಅವರು ವಿಷಾದಿಸುವಂತೆ ನಾವು ಮಾಡುತ್ತೇವೆ ಎಂದು ಖಮೇನಿ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಕ್ವಾಡ್ಸ್‌ ಫೋರ್ಸ್ ವಿದೇಶಿ ಕಾರ್ಯಾಚರಣೆ ವಿಭಾಗದ ಇಬ್ಬರು ಕಮಾಂಡರ್‌ಗಳಾದ, ಬ್ರಿಗೇಡಿಯರ್ ಜನರಲ್‌ಗಳಾದ ಮೊಹಮ್ಮದ್ ರೆಜಾ ಜಹೇದಿ ಮತ್ತು ಮೊಹಮ್ಮದ್ ಹಾದಿ ಹಾಜಿ ರಹೀಮಿ ಸೇರಿ ಏಳು ಕ್ರಾಂತಿಕಾರಿ ಗಾರ್ಡ್‌ಗಳನ್ನು ಇಸ್ರೇಲ್‌ ಕೊಂದಿದೆ ಎಂದು ಇರಾನ್‌ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಸೋಮವಾರ ನಡೆದ ಭಾರಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳಲ್ಲದೆ ಇತರ ನಾಲ್ವರು ನಾಗರಿಕರು ಹತರಾಗಿದ್ದು, ಒಟ್ಟು 11 ಮಂದಿ ಸಾವಿಗೀಡಾಗಿದ್ದರು.



Join Whatsapp