►ಅಜೇಶ್, ನಿದಿನ್ ಕುಮಾರ್, ಅಖಿಲೇಶ್ ಖುಲಾಸೆ
ಕಾಸರಗೋಡು: ಚೂರಿ ಮದ್ರಸದ ಶಿಕ್ಷಕ, ಕೊಡಗು ನಿವಾಸಿಯಾಗಿದ್ದ ಮೊಹಮ್ಮದ್ ರಿಯಾಝ್ ಮೌಲವಿ (27) ಅವರನ್ನು ಕತ್ತು ಸೀಳಿ ಕೊಲೆಗೈದ ಪ್ರಕರಣದ ಮೂವರು ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.
ಕಾಸರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಅಜೇಶ್ ಅಲಿಯಾಸ್ ಅಪ್ಪು (29), ನಿದಿನ್ ಕುಮಾರ್ (28) ಮತ್ತು ಅಖಿಲೇಶ್ ಅಲಿಯಾಸ್ ಅಖಿಲ್ (34) ಅವರನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಾರ್ಚ್ 20, 2017 ರಂದು ರಾತ್ರಿ ರಿಯಾಜ್ ಮೌಲ್ವಿಯನ್ನು ಮಸೀದಿಯಲ್ಲಿರುವ ಅವರ ನಿವಾಸದಲ್ಲಿ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ಮೂರೇ ದಿನಗಳಲ್ಲಿ ತನಿಖಾ ತಂಡ ಆರೋಪಿಯನ್ನು ಬಂಧಿಸಿತ್ತು.
ಇನ್ನೂ ಜಾಮೀನು ಸಿಗದ ಕಾರಣ ಆರೋಪಿಗಳು ಬಂಧನವಾಗಿ ಏಳು ವರ್ಷಗಳಿಂದ ಜೈಲಿನಲ್ಲಿದ್ದರು. ಈ ಪ್ರಕರಣವನ್ನು ಇದುವರೆಗೆ ಏಳು ನ್ಯಾಯಾಧೀಶರು ವಿಚಾರಣೆ ನಡೆಸಿದ್ದಾರೆ.