WIM ರಾಜ್ಯ ಮಟ್ಟದ ‘ನಮ್ಮ ಮತ ನಮ್ಮ ಶಕ್ತಿ’ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮ

Prasthutha|

ನವದೆಹಲಿ: ರಾಜ್ಯ ಮಟ್ಟದ ‘ನಮ್ಮ ಮತ ನಮ್ಮ ಶಕ್ತಿ’ ರಾಷ್ಟ್ರೀಯ ಅಭಿಯಾನದ ಭಾಗವಾಗಿ ವಿವಿಧ ಜಿಲ್ಲೆಗಳಲ್ಲಿ ಭಿತ್ತಿ ಪತ್ರ ಪ್ರದರ್ಶನ ಕಾರ್ಯಕ್ರಮ ನಡೆಸಲಾಯಿತು.

- Advertisement -

ಕರಪತ್ರ ವಿತರಣೆ, ಮನೆ-ಮನೆ ಭೇಟಿ ಮತ್ತು ಸಾರ್ವಜನಿಕ ಕಾರ್ಯಕ್ರಮ, ಆನ್ಲೈನ್ ಅಭಿಯಾನ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಲು ರಾಜ್ಯಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಫಾತಿಮ ನಸೀಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಮನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸಮಿತಿಯ “ನಮ್ಮ ಮತ ನಮ್ಮ ಶಕ್ತಿ” ಎಂಬ ಶೀರ್ಷಿಕೆಯಡಿಯಲ್ಲಿ ಒಂದು ತಿಂಗಳ ರಾಷ್ಟ್ರೀಯ ಅಭಿಯಾನದ ಉದ್ಘಾಟನೆ ಮಾರ್ಚ್ 8ರ ಮಹಿಳಾ ದಿನಾಚರಣೆಯಂದು ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್ ತುಂಬೆ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ನೆರವೇರಿಸಿದ್ದರು.

- Advertisement -

ಮಹಿಳೆಯರು ಬಹುಸಂಖ್ಯಾತ ಮತದಾರರಾಗಿರುವ ಭಾರತದಲ್ಲಿ ಮಹಿಳೆಯರಿಲ್ಲದೆ ದೇಶದ ಪ್ರಗತಿ ಅಸಾಧ್ಯ. ದೇಶದ ಸಾರಥಿಯನ್ನು ಒಬ್ಬ ಉತ್ತಮ ನಾಯಕನಿಗೆ ನೀಡುವಲ್ಲಿ ಮಹಿಳೆಯರ ಪಾಲು ಅತ್ಯಗತ್ಯ ವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಅಮೂಲ್ಯವಾದ ಮತವನ್ನು ದೇಶದ ಪ್ರಗತಿಗಾಗಿ ಉಪಯುಕ್ತ ರೀತಿಯಲ್ಲಿ ಬಳಸುವಲ್ಲಿ ಹಾಗೂ ಮಹಿಳಾ ಸಮಾಜವನ್ನು ಜಾಗೃತಗೊಳಿಸಲು ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಫಾತಿಮ ನಸೀಮ ತಿಳಿಸಿದ್ದಾರೆ.



Join Whatsapp