ಇಂದಿನ ಸಿಇಸಿಯಲ್ಲಿ ಟಿಕೆಟ್ ಹಂಚಿಕೆ ಬಹುತೇಕ ಅಂತಿಮ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ಇಂದಿನ ಸಿಇಸಿಯಲ್ಲಿ ಟಿಕೆಟ್ ಹಂಚಿಕೆ ಎಲ್ಲವೂ ಸ್ಪಷ್ಟವಾಗಲಿದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

- Advertisement -


ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಒಂದೆರಡು ಕ್ಷೇತ್ರ ಹೊರತುಪಡಿಸಿ ಇತರ ಎಲ್ಲ ಕ್ಷೇತ್ರಗಳ ವಿಚಾರ ಸಭೆಯಲ್ಲಿ ಸ್ಪಷ್ಟವಾಗುವ ವಿಶ್ವಾಸ ಇದೆ’ ಎಂದರು.


ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಇದು ನನಗೆ ಮೊದಲಿಂದಲೂ ಗೊತ್ತಿರುವ ವಿಚಾರ. ದೇವೇಗೌಡ ಅವರು ಯಾಕೆ ಅಳಿಯನನ್ನು ಬಿಜೆಪಿ ಚಿಹ್ನೆಯಲ್ಲಿ ನಿಲ್ಲಿಸಿದ್ದಾರೆ. ಅದು ಜೆಡಿಎಸ್ ನ ಮೊದಲ ಸೂಸೈಡ್ ಅಟೆಂಪ್ಟ್. ಅದನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಇದರಿಂದ ಅವರ ಪಕ್ಷಕ್ಕೆ ಒಂದು ದೊಡ್ಡ ಮಜುಗರ ಉಂಟಾಗಿದೆ. ಅದು ಅವರ ಪಕ್ಷದ ತೀರ್ಮಾನ. ನಾನು ಮಧ್ಯಪ್ರವೇಶ ಮಾಡಲು ಇಷ್ಟಪಡಲ್ಲ’ ಎಂದರು.



Join Whatsapp