ಲೈಂಗಿಕ ದೌರ್ಜನ್ಯವೆಸಗಿದ ಯಡಿಯೂರಪ್ಪರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯ

Prasthutha|

ಮಂಗಳೂರು: ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯೋರ್ವಳು ನ್ಯಾಯ ಅರಸಿಕೊಂಡು  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಬಳಿ ತೆರಳಿದಂತಹ ಸಂದರ್ಭದಲ್ಲಿ ನ್ಯಾಯ ಕೊಡುವುದು ಬಿಟ್ಟು ಲೈಂಗಿಕ ದೌರ್ಜನ್ಯ ನಡೆಸಿದ ಘಟನೆಯನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡಿಸಿದೆ.

- Advertisement -

ರಾಜ್ಯದ ಮಾಜಿ ಮುಖ್ಯಮಂತ್ರಿಯೋರ್ವ ಇಂತಹ ನೀಚ ಕ್ರತ್ಯ ಎಸಗಿರುವುದುರಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಮಹಿಳೆಯರಿಗೆ ಭದ್ರತೆಯೊದಗಿಸುವಲ್ಲಿ  ಸರ್ಕಾರದ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದೆ.

ಮಹಿಳೆಯರ ಬಗ್ಗೆ ಋಣಾತ್ಮಕ ಚಿಂತನೆ ಹೊಂದಿರುವ ಬಿಜೆಪಿ ಪಕ್ಷದಿಂದ ದೇಶದಲ್ಲಿ ಮಹಿಳೆಯರ ಸುರಕ್ಷತೆ ಸಾಧ್ಯವಿಲ್ಲ ಎಂದು ಪದೇ ಪದೇ ಸಾಬೀತಾಗುತ್ತಿದೆ.’ದೂರುದಾರೆ ಮಾನಸಿಕ ಅಸ್ವಸ್ಥೆ ‘ಎಂದು ಹೇಳಿಕೆ ನೀಡಿ ಗ್ರಹಸಚಿವರು ತನಿಖೆಯ ದಿಕ್ಕು ತಪ್ಪಿಸಿ, ಕಲ್ಲಡ್ಕ ಪ್ರಭಾಕರ ಭಟ್ ರಿಗೆ ರಕ್ಷಣೆ ನೀಡಿದಂತೆ ಯಡಿಯೂರಪ್ಪನವರಿಗೂ ರಕ್ಷಣೆ ನೀಡಿ ಬಿಜೆಪಿಯವರೊಂದಿಗೆ  ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂಬ ಸಂಶಯ ಬಲವಾಗುತ್ತಿದೆ. ಸರ್ಕಾರ ತಕ್ಷಣ ಎಚ್ಚೆತ್ತು ಆರೋಪಿಯನ್ನು ಬಂಧಿಸಿ ,ಯಾವುದೇ ಪ್ರಭಾವಕ್ಕೊಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp