ತುಮಕೂರು: ಕುಣಿಗಲ್ ತಾಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷ ಬಾಲಮಂಜುನಾಥ ಸ್ವಾಮಿ ಅವರನ್ನು ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.
ಪೋಕ್ಸೊ ಕೇಸ್ ನಡಿ ಸ್ವಾಮೀಜಿ ಹಾಗೂ ಆಪ್ತ ಸಹಾಯಕ ಅಭಿಲಾಷ್ ನನ್ನು ಬಂಧಿಸಲಾಗಿದೆ. ಪೊಲೀಸರ ಪರಿಶೀಲನೆ ವೇಳೆ ಸ್ವಾಮೀಜಿಯ ಅಸಲಿ ಮುಖವಾಡ ಬಯಲಾಗಿದ್ದು ತುಮಕೂರು ಎಸ್ಪಿ ಅಶೋಕ್ ಕೆ.ವಿ. ನೇತೃತ್ವದಲ್ಲಿ ಬಾಲಮಂಜುನಾಥ ಸ್ವಾಮೀಜಿ, ಅಭಿಲಾಷ್ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಮಠದಲ್ಲೇ ಅಪ್ರಾಪ್ತ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ಕೊಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಭಿಷೇಕ್ ಕೊಟ್ಟ ಮಾಹಿತಿ ಮೇರೆಗೆ ತಡರಾತ್ರಿ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು ಪರಿಶೀಲನೆ ವೇಳೆ ಸ್ವಾಮೀಜಿಯ ಅಸಲಿ ಮುಖವಾಡ ಬಯಲು ಮಾಡಿದ್ದಾರೆ.