ತುಮಕೂರು: ಪರೀಕ್ಷೆ ಬರೆಯಲಾಗದ ಅತ್ಯಾಚಾರ ಸಂತ್ರಸ್ತ ಬಾಲಕಿ

Prasthutha|

ತುಮಕೂರು: ನಗರದ ಸಿದ್ಧಗಂಗಾ ಮಠದ ಬಳಿ ಮಾರ್ಚ್ 4ರಂದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕಿದ್ದು, ಪರೀಕ್ಷೆಯಿಂದ ವಂಚಿತಳಾಗಿ ನರಳುವಂತಾಗಿದೆ.

- Advertisement -

ಅಮಾನವೀಯ ಕೃತ್ಯ ನಡೆದು ಐದು ದಿನ ಕಳೆದಿದೆ. ತೀವ್ರ ರಕ್ತಸ್ರಾವದಿಂದ ಬಳಲಿದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹನುಮಂತ, ಅಮೋಘ ಅತ್ಯಾಚಾರ ಎಸಗಿದ್ದು, ಪ್ರತಾಪ್ ಎಂಬಾತ ಬಾಲಕಿಯನ್ನು ಕರೆತರಲು ಸಹಾಯ ಮಾಡಿದ್ದ ಎನ್ನಲಾಗಿದೆ. ಪೊಲೀಸರು ಬಾಲಕಿಯ ಹೇಳಿಕೆ ಪಡೆದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಮೂವರನ್ನೂ ಬಂಧಿಸಲಾಗಿದೆ.

- Advertisement -

ಆರೋಪಿಗಳು ಕ್ಯಾಟರಿಂಗ್ ಕೆಲಸ ಮಾಡಿಕೊಂಡು ಸಿದ್ಧಗಂಗಾ ಮಠದಲ್ಲಿ ವಾಸವಿದ್ದರು. ಇತ್ತೀಚೆಗೆ ಮಠದಿಂದ ಹೊರ ಬಂದು ಬಂಡೆಪಾಳ್ಯದ ಬಳಿ ಬಾಡಿಗೆ ರೂಮ್ ಪಡೆದುಕೊಂಡು ಅಲ್ಲಿಯೇ ಇದ್ದರು.

ಬಾಲಕಿ ತನ್ನ ಸ್ನೇಹಿತನ ಜೊತೆಗೆ ಮಠದ ಜಾತ್ರೆಗೆ ಹೋಗುತ್ತಿದ್ದಳು. ಇಬ್ಬರು ಮಾರ್ಗಮಧ್ಯೆ ಮರದ ಕೆಳಗಡೆ ಕೂತಿದ್ದರು. ಆರೋಪಿಗಳು ಇದನ್ನು ಗಮನಿಸಿ ವಿಡಿಯೊ ಮಾಡಿಕೊಂಡಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುವುದಾಗಿ ಬಾಲಕಿ ಮತ್ತು ಆಕೆಯ ಸ್ನೇಹಿತನಿಗೆ ಬೆದರಿಕೆ ಹಾಕಿದ್ದಾರೆ.

ನಂತರ ಆರೋಪಿಗಳು ಬಾಲಕಿಯನ್ನು ಬೈಕ್ ಮೇಲೆ ಬಂಡೆಪಾಳ್ಯದ ಬಳಿಯ ರೂಮಿಗೆ ಕರೆದೊಯ್ದು ಕೃತ್ಯ ಎಸಗಿದ್ದರು. ಬಳಿಕ ಬಾಲಕಿಯನ್ನು ಕರೆತಂದು ಮಠದ ಬಳಿ ಬಿಟ್ಟು ಹೋಗಿದ್ದರು. ಬಾಲಕಿ ಸ್ನೇಹಿತ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದ.



Join Whatsapp