ಸಚಿನ್ ತೆಂಡೂಲ್ಕರ್ ವಿಕೆಟ್ ಕಬಳಿಸಿದ ಮುನಾವರ್ ಫಾರೂಖಿ: ಕ್ರೀಡಾಂಗಣ ಸ್ತಬ್ಧ!

Prasthutha|

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ಶುರುವಾಗಿದೆ. 6 ತಂಡಗಳ ನಡುವಣ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದಿದ್ದು ಮಾಸ್ಟರ್ಸ್ XI ಮತ್ತು ಖಿಲಾಡಿ XI ತಂಡಗಳು. ಮಾಸ್ಟರ್ಸ್ ತಂಡವನ್ನು ಸಚಿನ್ ತೆಂಡೂಲ್ಕರ್ ಮುನ್ನಡೆಸಿದರೆ, ಖಿಲಾಡಿ ತಂಡದ ಸಾರಥ್ಯವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ವಹಿಸಿಕೊಂಡಿದ್ದರು.

- Advertisement -

ಈ ಪಂದ್ಯದಲ್ಲಿ ಅಕ್ಷಯ್ ಕುಮಾರ್ ಸಚಿನ್ ತೆಂಡೂಲ್ಕರ್ ಗೆ ಬೌಲಿಂಗ್ ಮಾಡಿದರು. ಸಚಿನ್ ತೆಂಡೂಲ್ಕರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. 16 ಎಸೆತದಲ್ಲಿ ಸಚಿನ್ 30 ರನ್ ಸಿಡಿಸಿದ್ದರು.

ಆದರೆ ಮುನಾವರ್ ಫಾರೂಖಿ ಎಸೆತದಲ್ಲಿ ಸಿಕ್ಸರ್ ಸಿಡಿಸಿಲು ಯತ್ನಿಸಿದ ಸಚಿನ್ ತೆಂಡೂಲ್ಕರ್ ಶಾರ್ಟ್ ಥರ್ಡ್ ಮ್ಯಾನ್ ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ಸಚಿನ್ ವಿಕೆಟ್ ಪತನ ಕ್ರೀಡಾಂಗಣವನ್ನೇ ಸ್ತಬ್ಧ ಮಾಡಿತ್ತು.

- Advertisement -

ಸಚಿನ್ ವಿಕೆಟ್ ಪತನದ ಬಳಿಕ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಅಬ್ಬರಿಸಿದರು. ಇರ್ಫಾನ್ ಪಠಾಣ್ 32 ರನ್ ಸಿಡಿಸಿದ್ದರು. 10 ಓವರ್ ಪಂದ್ಯದಲ್ಲಿ ಮಾಸ್ಟರ್ 11 ತಂಡ ಭರ್ಜರಿ ಗೆಲುವು ದಾಖಲಿಸಿತ್ತು. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಖಿಲಾಡಿ 11 ತಂಡದ ಮುನಾವರ್ ಬ್ಯಾಟಿಂಗ್ nಲ್ಲೂ ಅಬ್ಬರಿಸಿದರು. 26 ಎಸೆತದಲ್ಲಿ 26 ರನ್ ಸಿಡಿಸಿದರು. ಆದರೆ ಗೆಲುವು ಸಿಗಲಿಲ್ಲ.



Join Whatsapp