ಮಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಬಾಂಬ್ ಇಟ್ಟವರು ಯಾರು ಅವರ ಉದ್ದೇಶ ಏನಾಗಿತ್ತು ಮೊದಲಾದ ಸಂಗತಿಗಳು ಗೊತ್ತಾದ ಮೇಲೆ ವಿಷಯದ ಬಗ್ಗೆ ಸ್ಪಷ್ಟವಾದ ವಿವರಣೆ ನೀಡಬಹುದು. ಆದರೆ, ತನಿಖೆ ಪೂರ್ಣಗೊಳ್ಳುವ ಮೊದಲು, ಅಪರಾಧಿ ಯಾರು ಅನ್ನೋದು ಗೊತ್ತಾಗುವ ಮೊದಲೇ ನಮಗೆ ತೋಚಿದ್ದನ್ನು ಹೇಳೋದು, ಬರೆಯೋದು, ಮಾಧ್ಯಮಗಳಲ್ಲಿ ತೋರಿಸುವುದು ಸರಿಯಲ್ಲ ಎಂದು ಗುಂಡೂರಾವ್ ಹೇಳಿದರು.
ಪುಲ್ವಾಮಾದಲ್ಲಿ 150 ಕೇಜಿಯಷ್ಟು ಆರ್ ಡಿ ಎಕ್ಸ್ ಹೇಗೆ ಬಂತು ಅಂತ ಬಿಜೆಪಿ ನಾಯಕರು ಹೇಳಲ್ಲ, ಆಗಿನ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ಅವರೇ ಅದೊಂದು ದೊಡ್ಡ ಸೆಕ್ಯುರಿಟಿ ಲ್ಯಾಪ್ಸ್ ಅಂತ ಹೇಳಿದ್ದಾರೆ ಎಂದು ಗುಂಡೂರಾವ್ ಹೇಳಿದರು.