ಚೆನ್ನೈ: ಪಕ್ಷ ಹೇಳಿದ್ರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ.
ಆದರೆ ನಮ್ಮ ಪಕ್ಷದ ಹಿರಿಯರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ. ಈ ಹಿಂದೆ ಅಣ್ಣಾಮಲೈ ಲೋಕಸಭೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ವೈಯಕ್ತಿಕ ಪೂರ್ವಾಗ್ರಹ ಅಥವಾ ಬಿಜೆಪಿಯಲ್ಲಿ ನನಗೆ ಆ ಸ್ಥಾನ ಬೇಕು ಈ ಸ್ಥಾನಬೇಕು ಎಂಬ ಬೇಡಿಕೆಯನ್ನು ನಾನು ಇಟ್ಟಿಲ್ಲ. ಅದು ನನಗೆ ಇಷ್ಟನೂ ಇಲ್ಲ ಎಂದು ಹೇಳಿದ್ದಾರೆ.