ತನ್ನನ್ನೇ ಗುಂಡಿಕ್ಕಿ ಹತ್ಯೆ ಮಾಡುವ ದೃಶ್ಯ ಚಿತ್ರೀಕರಿಸಿದ ಯುವಕ | ವೀಡಿಯೊ ವೈರಲ್

Prasthutha|

ಮುಝಾಫರ್ ನಗರ : ತನ್ನನ್ನು ಗುಂಡಿಕ್ಕಿ ಹತ್ಯೆ ಮಾಡುವ ಸನ್ನಿವೇಶವನ್ನು ಸ್ವತಃ ಮೃತ ವ್ಯಕ್ತಿಯೇ ಸ್ವಯಂ ಚಿತ್ರೀಕರಿಸಿಕೊಂಡ ಘಟನೆ ನಡೆದಿದೆ.

- Advertisement -

ಉತ್ತರ ಪ್ರದೇಶದ ಮುಝಾಫರ್ ನಗರದಲ್ಲಿ ಈ ಘಟನೆ ನಡೆದಿದೆ. ಗುಂಡೇಟು ತಗುಲಿದ ಯುವಕನ ಕೈಯಿಂದ ಮೊಬೈಲ್ ಜಾರಿ ಕೆಳಕ್ಕೆ ಬಿದ್ದು, ದೃಶ್ಯಗಳು ಕಾಣಿಸುತ್ತಿರಲಿಲ್ಲ. ಆದರೆ ನೋವಿನಿಂದ ನರಳುತ್ತಿರುವ ಆರ್ತನಾದ ಕೇಳಿ ಬರುತ್ತಿದ್ದು, 30 ಸೆಕೆಂಡ್ ಗಳ  ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹತ್ಯೆಗೀಡಾದ ವ್ಯಕ್ತಿ ಮತ್ತು ಆರೋಪಿಯ ಹೊರತಾಗಿ ಇಬ್ಬರು ವೀಡಿಯೊದಲ್ಲಿ ಕಾಣುತ್ತಿದ್ದಾರೆ. ಅವರು ಮದ್ಯಪಾನ ಮಾಡುತ್ತಾ ಸಂಬಂಧವೇ ಇಲ್ಲದಂತೆ ಪಿಸ್ತೂಲಿನ ಸುತ್ತ ಅಡ್ಡಾಡುತ್ತಿದ್ದಾರೆ. ಆರೋಪಿ ಶೂಟ್ ಮಾಡುವ ಮುನ್ನ ಇಬ್ಬರೂ ಮಾತನಾಡುತ್ತಾ ನಗುತ್ತಿರುವ ದೃಶ್ಯ ಸೆರೆಯಾಗಿದೆ. ಇವೆಲ್ಲವನ್ನೂ ಹತ್ಯೆಗೀಡಾದ ವ್ಯಕ್ತಿ ಚಿತ್ರೀಕರಿಸಿಕೊಂಡಿದ್ದಾನೆ.

- Advertisement -

ಆರೋಪಿ ಮತ್ತು ಮೃತ ವ್ಯಕ್ತಿ ಸಹೋದರ ಸಂಬಂಧಿಗಳಾಗಿದ್ದು, ಶೂಟ್ ಮಾಡಿದ್ದ ವ್ಯಕ್ತಿ ಪಿಸ್ತೂಲ್ ಸರಿ ಇದೆಯೇ ಎಂದು ಪರಿಶೀಲಿಸುತ್ತಿದ್ದ ಎನ್ನಲಾಗಿದೆ. ಈ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರ ಪತ್ತೆಗಾಗಿ ಪೊಲೀಸರು ಕಾರ್ಯಾಚರಿಸುತ್ತಿದ್ದಾರೆ.     

Join Whatsapp