ಆಲ್ ಇಂಡಿಯಾ ರೇಡಿಯೋದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಮೀನ್ ಸಯಾನಿ ಅವರು ನಿಧನರಾಗಿದ್ದಾರೆ.
91ನೇ ವಯಸ್ಸಿನಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುತ್ರ ರಾಜಿಲ್ ಸಯಾನಿ ಅವರು ತಂದೆಯ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಮಂಗಳವಾರ (ಫೆಬ್ರವರಿ 20) ರಾತ್ರಿ ಅಮೀನ್ ಸಯಾನಿ ಅವರಿಗೆ ಹಾರ್ಟ್ ಅಟ್ಯಾಕ್ ಆಯಿತು. ಕೂಡಲೇ ಅವರನ್ನು ಮುಂಬೈನ ಎಚ್ ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ‘ಬಿನಾಕಾ ಗೀತ್ ಮಾಲಾ’ ರೀತಿಯ ಜನಪ್ರಿಯ ಶೋಗಳನ್ನು ನಡೆಸಿಕೊಡುವ ಮೂಲಕ ಅಮೀನ್ ಸಯಾನಿ ಅವರು ಜನರ ಮೆಚ್ಚುಗೆ ಗಳಿಸಿದ್ದರು. ಅವರ ನಿಧನಕ್ಕೆ ದೇಶಾದ್ಯಂತ ಕಂಬನಿ ಮಿಡಿಯಲಾಗುತ್ತಿದೆ.