ಆನ್ ಲೈನ್ ಸುದ್ದಿ ವಾಹಿನಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದ ‘ಭಯಾನಕ’ ನಿಯಮಗಳು!

Prasthutha|

ನವದೆಹಲಿ : ಡಿಜಿಟಲ್ ಸುದ್ದಿ ವಾಹಿನಿ ಮತ್ತು ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ಗಳನ್ನು ನಿಯಂತ್ರಿಸುವ ಸರಕಾರದ ಹೊಸ ನೀತಿಗಳ ಬಗ್ಗೆ ಈಗಾಗಲೇ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಹಲವಾರು ಸಚಿವಾಲಯಗಳನ್ನು ಒಳಗೊಂಡ ಕಟ್ಟುನಿಟ್ಟಾದ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಒಳಗೊಂಡಿವೆ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ವಿಷಯವನ್ನು ನಿಷೇಧಿಸುವ ನೀತಿ ಸಂಹಿತೆಯನ್ನು ಈ ನಿಯಮಗಳು ಒಳಗೊಂಡಿವೆ ಎಂದು ‘ಎನ್ ಡಿಟಿವಿ’ ವರದಿ ಮಾಡಿದೆ.

- Advertisement -

ಕರಡು ನಿಯಮಗಳನ್ನು ನೋಡಿದರೆ ಇವು ಭಯಾನಕವಾಗಿವೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಮಾಹಿತಿ ತಂತ್ರಜ್ಞಾನ (ಮಧ್ಯ ಭಾಗೀದಾರರು ಮತ್ತು ಡಿಜಿಟಲ್ ಮಿಡಿಯಾ ಎಥಿಕ್ಸ್ ಕೋಡ್ ಮಾರ್ಗದರ್ಶಿ) ನಿಯಮಗಳು 2021 ಮೊದಲ ಬಾರಿಗೆ ಡಿಜಿಟಲ್ ಸಿದ್ದಿ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಒಟಿಟಿ ಸ್ಟ್ರೀಮಿಂಗ್ ಸೇವೆಗಳನ್ನು ಸರಕಾರ ಹೇಗೆ ನಿಯಂತ್ರಿಸುತ್ತದೆ ಎಂದು ವಿವರಿಸುತ್ತದೆ.

ಈ ಡ್ರಾಫ್ಟ್ ನ ಪ್ರಮುಖ ಅಂಶುಗಳೂ ಈ ಕೆಳಗಿನಂತಿವೆ :

  • ಅವಮಾನಕರ, ಅಶ್ಲೀಲ, ಮಾನಹಾನಿಕರ, ವರ್ಣಬೇಧ ನೀತಿಯ, ಅಪ್ರಾಪ್ತ ವಯಸ್ಕರಿಗೆ ಹಾನಿಕಾರಕವಾದ ವಿಷಯ ಮತ್ತು ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವ ಮತ್ತು ಇತರ ದೇಶಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ತರುವ ಕಂಟೆಂಟ್ ನಿಷೇಧಿಸುವುದು
  • ಅಂತಹ ಯಾವುದೇ ವಿಷಯವು ಪ್ರಸಾರವಾದರೆ ಸೂಚನೆ ನೀಡಿದ 36 ಗಂಟೆಗಳ ಒಳಗೆ ಅಥವಾ ನ್ಯಾಯಾಲಯದ ಆದೇಶದೊಳಗೆ ಅದನ್ನು ಸಾಧ್ಯವಾದಷ್ಟು ಬೇಗ ತೆಗೆದು ಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.
  • ಸೋಶಿಯಲ್ ಮೀಡಿಯಾ ಮೆಸೇಜಿಂಗ್ ಸೈಟ್ ಗಳು ಮಾಹಿತಿಯನ್ನು ಮೊದಲು ಹುಟ್ಟು ಹಾಕಿದವರ ಟ್ರಾಕಿಂಗ್ ಅನ್ನು ಸಕ್ರಿಯಗೊಳಿಸಬೇಕು
  • ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರ ಹೊಂದಿರುವ ಸರ್ಕಾರಿ ಸಂಸ್ಥೆಗೆ ಮಧ್ಯವರ್ತಿ/ಭಾಗೀದಾರ ಸೈಬರ್ ಭದ್ರತಾ ಲೋಪದ ವಿವರಗಳನ್ನು 72 ಗಂಟೆಗಳ ಒಳಗೆ ಒದಗಿಸಬೇಕು.
  • ದೂರುಗಳನ್ನು ಸ್ವೀಕರಿಸಲು, ಅಂಗೀಕರಿಸಲು ಮತ್ತು ಒಂದು ತಿಂಗಳೊಳಗೆ ಪರಿಹರಿಸಲು ಕಂಪೆನಿಗಳು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.
  • ಮಧ್ಯ ಭಾಗೀದಾರನು ದೂರಿನ 24 ಗಂಟೆಗಳ ಒಳಗೆ ಕಾನೂನು ಬಾಹಿರ ಅಥವಾ ಆಕ್ರಮಣಕಾರಿ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.
  • ನೀತಿ ಸಂಹಿತೆಯನ್ನು ಜಾರಿಗೊಳಿಸಲು ಮೂರು ಹಂತದ ಕಾರ್ಯವಿಧಾನ; ಸ್ವಯಂ ನಿಯಂತ್ರಣ, ಸ್ವಯಂ ನಿಯಂತ್ರಿಸುವ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ, ಸರಕಾರದ ಮೇಲ್ವಿಚಾರಣಾ ಕಾರ್ಯ ವಿಧಾನ.     
Join Whatsapp