ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಪತಿಯೊಬ್ಬ ಪತ್ನಿಯ ಕತ್ತು ಸೀಳಿ ಕೊಂದ ಬಳಿಕ ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ಬೀದಿ ಬೀದಿಗಳಲ್ಲಿ ಓಡಾಡಿದ್ದಾನೆ. ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲೂ ಇದೇ ರೀತಿಯ ಭೀಕರ ದೃಶ್ಯ ಕಾಣಸಿಕ್ಕಿತ್ತು.
ಎರಡು ದಿನಗಳ ಅಂತರದಲ್ಲಿ ಅಂತಹದೇ ಮತ್ತೊಂದು ಘಟನೆ ನಡೆದಿದೆ. ಪತ್ನಿಯನ್ನು ಕೊಂದ ಬಳಿಕ ಒಂದು ಕೈಯಲ್ಲಿ ಪತ್ನಿಯ ತುಂಡರಿಸಿದ ತಲೆ ಹಾಗೂ ಇನ್ನೊಂದು ಕೈಯಲ್ಲಿ ಕೃತ್ಯ ಎಸಗಿದ ಆಯುಧವನ್ನು ಹಿಡಿದು ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಈ ಆಘಾತಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಕುಡಗೋಲಿನಿಂದ ಶಿರಚ್ಛೇದ
ಬಸ್ರಾ ಗ್ರಾಮದ ನಿವಾಸಿ ಅನಿಲ್ ಕುಮಾರ್ ಎಂಬಾತ ಕುಡುಗೋಲಿನಿಂದ ಪತ್ನಿ ವಂದನಾಳ ಶಿರಚ್ಛೇದ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಪತ್ನಿಗೆ ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳು ವರ್ಷಗಳ ಹಿಂದೆಯಷ್ಟೇ ಇವರ ಮದುವೆಯಾಗಿತ್ತು.
ಜಗಳದ ಬಳಿಕ ಕೊಲೆ
ಅಧಿಕಾರಿಗಳ ಪ್ರಕಾರ, ಶುಕ್ರವಾರ ಬಸ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆಲವು ದಿನಗಳ ಹಿಂದೆ ಮನೆಯಲ್ಲಿ ಲವ್ ಲೆಟರ್ ಪತ್ತೆಯಾದ ಬೆನ್ನಲ್ಲೇ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸುವಾಗ ಜಗಳ ನಡೆದು ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಅನುಮಾನದಲ್ಲಿ ಶುರುವಾದ ಜಗಳ ತಾರಕಕ್ಕೇರಿ ಅನಿಲ್ ಕುಮಾರ್ ಕುಡುಗೋಲಿನಿಂದ ಕತ್ತನ್ನು ಕೊಯ್ದಿದ್ದಾನೆ. ಹೆಂಡತಿಯ ಕತ್ತರಿಸಿದ ತಲೆಯನ್ನು ಹೊತ್ತುಕೊಂಡು ಬರಿಗಾಲಿನಲ್ಲಿ ತಿರುಗಿದ್ದಾನೆ. ಈ ವೇಳೆ ರಸ್ತೆಬದಿಯಲ್ಲಿ ನಿಂತಿದ್ದ ಕೆಲವರಿಗೆ ಕುಡುಗೋಲು ತೋರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಾಹಿತಿ ಪಡೆದ ಫತೇಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.
ಅನಾಥರಾದ ಇಬ್ಬರು ಮಕ್ಕಳ
ಆರೋಪಿ ಅನಿಲ್ ಕುಮಾರ್ ವಂದನಾ ದಂಪತಿಗೆ 2 ಮಕ್ಕಳಿದ್ದಾರೆ.