ಅಶೋಕ್​, ಅಶ್ವಥ್​ ನಾರಾಯಣ್ ಪೊಲೀಸ್​ ವಶಕ್ಕೆ: ಫೆ.9ಕ್ಕೆ ಮಂಡ್ಯ ನಗರ ಬಂದ್​​ಗೆ ಕರೆ

Prasthutha|

ಮಂಡ್ಯ: ಹನುಮ ಧ್ವಜ ತೆರವುಗೊಳಿಸಿದ ಹಿನ್ನೆಲೆ ಕೆರಗೋಡು ಗ್ರಾಮಕ್ಕೆ ಆಗಮಿಸಿದ್ದ ಬಿಜೆಪಿ ನಾಯಕರಾದ ಆರ್ ಅಶೋಕ್ ಮತ್ತು ಅಶ್ವಥ್ ನಾರಾಯಣ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಿಂದ ಕರೆದುಕೊಂಡು ಹೋಗಿದ್ದಾರೆ.

- Advertisement -

ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಪ್ರಕರಣದ ಸಂಬಂಧ ಫೆಬ್ರವರಿ 9ಕ್ಕೆ ಮಂಡ್ಯ ನಗರ ಬಂದ್ ಗೆ ಭಜರಂಗದಳ ಕರೆ ನೀಡಿದೆ. ಮತ್ತೆ ಹನುಮ ಧ್ವಜ ಹಾರಟಕ್ಕೆ ಒತ್ತಾಯಿಸಿ ಬೃಹತ್ ಹೋರಾಟಕ್ಕೆ ಭಜರಂಗದಳ, ಬಂದ್​ ನಡೆಸಿ ಒತ್ತಡ ತರಲು ಮುಂದಾಗಿದೆ.

ಹನುಮನ ಧ್ವಜ ಇಳಿಸಲು ಶಾಸಕ ಗಣಿಗ ರವಿಯವರೇ ಕಾರಣ ಎಂದು ಶಾಸಕರ ಭಾವ ಚಿತ್ರಕ್ಕೆ ಬೆಂಕಿ ಹಚ್ಚಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ ಘಟನೆಯೂ ನಡೆದಿದೆ. ಈ ನಡುವೆ ಪೊಲೀಸರ ಮನವೊಲಿಕೆಗೂ ಬಗ್ಗದೇ ಧ್ವಜ ಸ್ತಂಬ ಹತ್ತಿ ಕೇಸರಿ ಬಾವುಟ ಹಾರಿಸಲು ಮಹಿಳೆಯರು, ಯುವಕರು ಯತ್ನಿಸಿದ್ದಾರೆ.



Join Whatsapp