ಅಬುಧಾಬಿಯಲ್ಲಿ SKSSF & ಬ್ಲಡ್ ಹೆಲ್ಪ್‌‌ಲೈನ್ ಆಶ್ರಯದಲ್ಲಿ ರಕ್ತದಾನ ಶಿಬಿರ

Prasthutha|

ಅಬುಧಾಬಿ: SKSSF ಕರ್ನಾಟಕ ಅಬುಧಾಬಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಸಮಸ್ತ 100ನೇ ವರ್ಷದ ಪ್ರಚಾರ್ಥ ಸಮ್ಮೇಳನದ ಉದ್ಘಾಟನೆ ಹಾಗೂ ದಿವಂಗತ ನೌಶಾದ್ ಹಾಜಿ ಸೂರಲ್ಪಾಡಿ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

- Advertisement -

ಶಿಬಿರದಲ್ಲಿ ಒಟ್ಟು 52 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಅಬುಧಾಬಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಸ್ತಾದ್ ಶಹೀರ್ ಹುದವಿ, ನಾವು ಮಾಡುವ ಎಲ್ಲಾ ಕೆಲಸ ಕಾರ್ಯಗಳು ಸೃಷ್ಟಿಕರ್ತ ಮತ್ತು ಅವನ ರಸೂಲರು ಇಷ್ಟಪಡುವ ರೀತಿಯಲ್ಲಿ ಇರಬೇಕು. ಆಗ ಮಾತ್ರ ನಾವು ಮಾಡುವ ಎಲ್ಲಾ ಕೆಲಸ ಕಾರ್ಯಗಳಿಗೆ ಅವನ ಕಡೆಯಿಂದ ಫ್ರತಿಫಲ ಸಿಗುತ್ತದೆ. ಅವನು ಇಷ್ಟಪಡದ ರೀತಿಯಲ್ಲಿ ನಡೆದರೆ ಅದರಿಂದ ನಮಗೆ ಸಿಗವುದು ಶೂನ್ಯ ಪ್ರತಿಫಲ ಎಂದು ಕಾರ್ಯಕರ್ತರಿಗೆ ಉಪದೇಶವನ್ನು ನೀಡಿದರು .

- Advertisement -

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾರೀಸ್ ವೆಲ್ಫೇರ್ ಆಶೋಸಿಯೇಶನ್ ಅಬುಧಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಸಂಸ್ಥೆಯು ಹಮ್ಮಿಕೊಂಡತಹ ರಕ್ತದಾನವನ್ನು ಪ್ರಶಂಸಿಸಿದರು. ರಕ್ತದಾನ ಕೇವಲ ಒಂದು ಸಣ್ಣರೀತಿಯ ದಾನ ಅಲ್ಲ. ಅದಕ್ಕೂ ಮಿಗಿಲಾಗಿ ಒಂದು ಜೀವವನ್ನು ರಕ್ಷಿಸಲು ನಾವೂ ಮಾಡುವಂತಹ ಶ್ರೇಷ್ಠ ದಾನ ಎಂದು ಹೇಳಿ ಸೇರಿದ ಕಾರ್ಯಕರ್ತರನ್ನು ಹುರಿದುಂಬಿಸಿದರು. ಎಸ್ ಕೆ ಎಸ್ ಎಸ್ ಎಫ್‌ನಂತಹ ಸಂಘಟನೆಯು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ಜನಪರ ಕಾರ್ಯಕ್ರಮಗಳಲ್ಲೂ ತೊಡಗಿಸಬೇಕೆಂದು ಕರೆ ನೀಡಿದರು.

ಅಬುಧಾಬಿ ಸುನ್ನಿ ಸೆಂಟರ್ ಇದರ ಅಧ್ಯಕ್ಷ ಅಸ್ಸಯ್ಯದ್ ಅಬ್ದಲ್ ರಹ್ಮಾನ್ ತಂಙಳ್ ಪ್ರಾಸ್ತವಿಕ ಮಾತುಗಳನ್ನಾಡಿ, SKSSF ಅಬುಧಾಬಿ ನಡೆಸುವ 2 ನೇ ರಕ್ತದಾನ ಶಿಬಿರದಿಂದ ಸಂತೋಷಗೊಂಡಿದ್ದೇನೆ. ಇನ್ನೂ ಅನೇಕ ಸಮಾಜ ಸೇವೆ ಕಾರ್ಯಕ್ರಮಗಳನ್ನು ಮಾಡಿ ಸಮಾಜಕ್ಕೆ ಉತ್ತಮಕೊಡುಗೆಯನ್ನು ನೀಡಬೇಕಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಯಾನ್ ರಿಯಲ್ ಎಸ್ಟೇಟ್ MD ಅನ್ಸಾರ್ ಬೆಳ್ಳಾರೆ, ಅಬುಧಾಬಿ ಉದ್ಯಮಿ ನಝೀರ್ ಬೆಳ್ಳಾರೆ ಶುಭಹಾರೈಸಿದರು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ವ್ಯವಸ್ಥಾಪಕರಾದ ಸಿರಾಜುದ್ದೀನ್ ಪರ್ಲಡ್ಕ ಹಾಗೂ ಎಸ್ ಕೆ ಎಸ್ ಎಸ್ ಎಫ್ ಅಬುಧಾಬಿ ಕರ್ನಾಟಕದ ಗೌರವಾಧ್ಯಕ್ಷ ಹನೀಫ್ ಅರಿಯಮೂಲೆ, ಶಿಬಿರದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರಾದ ಶಾಫಿ ಮಾಣಿ, ಯಾಕೂಬ್ ಫೈರೋಝ್ ಹಾಗೂ ಎಸ್ ಕೆ ಎಸ್ ಎಸ್ ಎಫ್ ಅಬುಧಾಬಿ ಕರ್ನಾಟಕದ ಪ್ರಮುಖರಾದ ಶಾಫಿ ಪೆರುವಾಯಿ, ಅಬೂಬಕ್ಕರ್ ಸಕಲೇಶ್ ಪುರ ಮತ್ತು ದಾರುಲ್ ಹಸನಿಯ್ಯ ಅಬುಧಾಬಿ ಸಮಿತಿ ಅಧ್ಯಕ್ಷ ಶಾಕಿರ್ ಕೂರ್ನಡ್ಕ ,ರಕ್ತದಾನ ಶಿಬಿರ ದ ಅಡ್ಮಿನ್ ಹಿದಾಯತ್ ರಹ್ಮಾನ್ ಮರ್ವೆಲ್ , ತ್ವಾಹ ಉಪ್ಪಿನಂಗಡಿ,ಶಬೀರ್ ಕನ್ನಡಿಕಟ್ಟೆ , ಜೌಹರ್ ಕನ್ನಡಿಕಟ್ಟೆ ,ರಶೀದ್ ಕರಾಯ ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಯಹ್ಯಾ ಕೊಡ್ಲಿಪೇಟೆ ಸ್ವಾಗತಿಸಿದರೆ, SKSSF ಅಬುಧಾಬಿ ಕರ್ನಾಟಕ ಸಮಿತಿ ಉಪಾಧ್ಯಕ್ಷ ಹಾಫಿಳ್ ಝೈನ್ ಸಖಾಫಿ ನಿರೂಪಿಸಿದರು. ಹಸನ್ ದಾರಿಮಿ ಉಸ್ತಾದ್ ಧನ್ಯವಾದ ಅರ್ಪಿಸಿದರು .



Join Whatsapp