ವಿಜಯಪುರ: ಆತನ ಮುಖ ನೋಡಿ ಯಾರೂ ಮತ ಹಾಕುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ಟೀಕೆ ಮುಂದುವರೆಸಿದ್ದಾರೆ. ದೆಹಲಿಗೆ ಹೋಗಿದ್ದರ ಬಗ್ಗೆ ಪತ್ರಕರ್ತರು ಕೇಳಿದಾಗ, ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದೆ. ಯಾರ ಭೇಟಿಗೂ ಹೋಗಿರಲಿಲ್ಲ, ಕಾರ್ಖಾನೆಯ ಕೆಲಸಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಹಾಗೂ ಕೆಲವು ಸಂಸದರನ್ನು ಭೇಟಿಯಾಗಿದ್ದೇನೆ ಎಂದು ಹೇಳಿದ ಯತ್ನಾಳ್, ವಿಜಯೇಂದ್ರ ಇದ್ದರೆ 35 ಲೋಕಸಭೆ ಸೀಟು ಬರುತ್ತದೆ ಎಂದು ಹೊಗಳಿ ನನಗೇನು? 28 ಕ್ಷೇತ್ರಗಳಿದ್ದರೂ 35 ಕ್ಷೇತ್ರ ಬರುತ್ತೆ ಎಂದು ಹೇಳಲಾಗುತ್ತಾ? ಇವರ ಮುಖ ನೋಡಿ ಯಾರೂ ಮತ ಹಾಕುವುದಿಲ್ಲ. ವಂಶವಾರು, ಭ್ರಷ್ಟಾಚಾರ ಅಡ್ಜಸ್ಟ್ ಮೆಂಟ್ ರಾಜಕಾರಣ ವಿರುದ್ಧ ನನ್ನ ಹೋರಾಟವಿದೆ. ನನಗೆ ಯಾರೂ ಬೈದಿಲ್ಲ, ಎಚ್ಚರಿಕೆಯನ್ನೂ ನೀಡಿಲ್ಲ ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.