ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥರಾಗಿ ಆಯ್ಕೆಯಾಗಿವುದನ್ನು ವಿರೋಧಿಸಿ ಕುಸ್ತಿಪಟು ಸಾಕ್ಷಿ ಮಲಿಕ್ ಕಣ್ಣೀರಾಗಿ ಕ್ರೀಡೆಗೆನೇ ವಿದಾಯ ಹೇಳಿದ ಬೆನ್ನಿಗೇ ಪದ್ಮಶ್ರೀ ಬಜರಂಗ್ ಪೂನಿಯಾ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥರಾಗಿ ಆಯ್ಕೆಯಾಗಿವುದನ್ನು ವಿರೋಧಿಸಿ ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿಯವರಿಗೆ ಹಿಂದಿರುಗಿಸುತ್ತಿದ್ದೇನೆ. ಇದನ್ನು ನನ್ನ ಪತ್ರದ ಮೂಲಕ ಘೋಷಿಸುತ್ತಿದ್ದೇನೆ ಎಂದು ಬಜರಂಗ್ ಪೂನಿಯಾ X ಮಾಡಿದ್ದಾರೆ.
ಬಜರಂಗ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿಗೆ ಬರೆದ ಪತ್ರದ ಟಿಪ್ಪಣಿಯನ್ನು ಪೋಸ್ಟ್ ಮಾಡಿ ತಮ್ಮ ದೊಡ್ಡ ನಿರ್ಧಾರವನ್ನು ಘೋಷಿಸಿದ್ದಾರೆ. ಏಸ್ ಕುಸ್ತಿಪಟುವಾದ ಬಜರಂಗ್ ಪೂನಿಯಾಗೆ 2019 ರಲ್ಲಿ ಪದ್ಮಶ್ರೀ ಗೌರವವನ್ನು ನೀಡಲಾಗಿದೆ.