ಬೆಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆ ಸಭೆ ನಡೆಸಿದ ಬಳಿಕ ಹೊಸ ವರ್ಷಾಚರಣೆಯ ಪರಿಷ್ಕೃತ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆಯುಕ್ತರು “ನ್ಯೂ ಇಯರ್ ಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಲಾಗುತ್ತಿದೆ. ಆಚರಣೆ ನಡೆಸುವುದರಿಂದ ಯಾರಿಗೂ ಕೂಡ ಅಡಚಣೆ ಆಗದ ರೀತಿ ನೋಡಿಕೊಳ್ಳಲಾಗುತ್ತದೆ. ಕಳೆದ ಬಾರಿ ಹೇಗೆ ನಡೆಸಲಾಗಿತ್ತೋ ಈ ಬಾರಿಯೂ ಅದೇ ರೀತಿ ಇರಲಿದೆ. ಎಂ.ಜಿ. ರೋಡ್ ನಲ್ಲಿ ಮಧ್ಯರಾತ್ರಿ ಆಚರಣೆಗೆ ಅನುಮತಿ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಕೋವಿಡ್ ಹೊಸ ಅಲೆಯ ಬಗ್ಗೆಯೂ ಅಧಿಕಾರಿಗಳ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.