ಮಂಗಳೂರು: ನಿರ್ಮಾಣ ಹಂತದ ಸೇತುವೆ ಕುಸಿದು ಮೂವರಿಗೆ ಗಾಯ

Prasthutha|

ಮಂಗಳೂರು: ನಿರ್ಮಾಣ ಹಂತದ ಕೆಳ ಸೇತುವೆ ಕುಸಿದು ಮೂವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಮಂಗಳೂರು ನಗರದ ಜೆಪ್ಪು ಮಹಾಕಾಳಿ ಪಡ್ಪುವಿನಲ್ಲಿ ನಡೆದಿದೆ.

- Advertisement -

ಕಳೆದ ಆರು ತಿಂಗಳಿಂದ ಇಲ್ಲಿ ಕಾಮಾಗಾರಿ ನಡೆಯುತ್ತಿದ್ದು ಸೋಮವಾರ ಏಕಾಏಕಿ ಸ್ಲ್ಯಾಬ್ ನಿರ್ಮಾಣ ಕಾಮಗಾರಿ ವೇಳೆ ಕುಸಿತ ಉಂಟಾಗಿದೆ. ಸುಮಾರು 12 ಕಾರ್ಮಿಕರು ಸ್ಲ್ಯಾಬ್ ಕೆಲಸದಲ್ಲಿ ನಿರತರಾಗಿದ್ದರು, ಈ ಸಂದರ್ಭ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.



Join Whatsapp