ದಾವೂದ್‌ ಇಬ್ರಾಹಿಂ ಆರೋಗ್ಯ ಚೆನ್ನಾಗಿದೆ, ವಿಷಪ್ರಾಶನ ಸುಳ್ಳು: ಛೋಟಾ ಶಕೀಲ್‌

Prasthutha|

ಮುಂಬೈ: ದಾವೂದ್ ಇಬ್ರಾಹಿಂ ಆರೋಗ್ಯ ಚೆನ್ನಾಗಿದೆ. ದಾವೂದ್‌ಗೆ ವಿಷ ಹಾಕಿದ್ದಾರೆ ಎಂಬ ವರದಿಗಳು ಸುಳ್ಳು ಎಂದು ದಾವೂದ್‌ನ ಆಪ್ತ ಛೋಟಾ ಶಕೀಲ್‌ ಹೇಳಿದ್ದಾನೆ.

- Advertisement -

ಪ್ರತಿ ವರ್ಷ ಕೆಲವರು ಇಂತಹ ಸುದ್ದಿಗಳನ್ನು ಹಬ್ಬಿಸುತ್ತಾರೆ ಎಂದೂ ಶಕೀಲ್‌ ಪ್ರತಿಕ್ರಿಯಿಸಿದ್ದಾನೆ.

‘ಅಪರಿಚಿತ’ರು ವಿಷ ಹಾಕಿದ್ದರಿಂದ ತೀವ್ರ ಅಸ್ವಸ್ಥಗೊಂಡಿರುವ ದಾವೂದ್‌ನನ್ನು ಕರಾಚಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಿಗಿ ಭದ್ರತೆ ನಡುವೆ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುದ್ದಿ ಹರಡಿತ್ತು. ವಿಷ ಹಾಕಿರುವ ಪರಿಣಾಮ ದಾವೂದ್‌ ಮೃತ್ತಪಟ್ಟಿದ್ದಾನೆ ಎಂಬ ವರದಿಗಳೂ ಹರಿದಾಡುತ್ತಿವೆ.

- Advertisement -

ಇದನ್ನು ಅಲ್ಲಗೆಳೆದಿರುವ ದಾವೂದ್ ಆಪ್ತ ಶಕೀಲ್, ಈ ಸುದ್ದಿ ಸುಳ್ಳು. ಆತ ಆರೋಗ್ಯವಾಗಿದ್ದಾನೆ. ಪ್ರತಿ ವರ್ಷ ಕೆಲವರು ಇಂತಹ ಸುದ್ದಿಗಳನ್ನು ಹಬ್ಬಿಸುತ್ತಾರೆ ಎಂದೂ ಪ್ರತಿಕ್ರಿಯಿಸಿದ್ದಾನೆ ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನದ ಐಷಾರಾಮಿ ಪ್ರದೇಶ ಕ್ಲಿಫ್ಟನ್‌ನ ಬಂಗ್ಲೆಯಲ್ಲಿ ದಾವೂದ್ ವಾಸ ಮಾಡುತ್ತಿದ್ದು, ಭಾರಿ ಭದ್ರತೆ ಒದಗಿಸಲಾಗಿದೆ. ಆಗಾಗ್ಗೆ ಕೊಲ್ಲಿ ರಾಷ್ಟ್ರಗಳಿಗೂ ಆತ ಭೇಟಿ ನೀಡುತ್ತಾನೆ ಎಂದು ಮೂಲಗಳು ಹೇಳುತ್ತವೆ.



Join Whatsapp