‘INDIA’ ಸಭೆಯಲ್ಲಿ ಸೀಟು ಹಂಚಿಕೆ ಚರ್ಚೆ: ಮಮತಾ ಬ್ಯಾನರ್ಜಿ

Prasthutha|

ನವದೆಹಲಿ: ದೆಹಲಿಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ನಡೆಯಲಿರುವ ‘INDIA’ ಬಣದ ಸಭೆಯು ವಿರೋಧ ಪಕ್ಷಗಳ ನಡುವೆ ಸೀಟು ಹಂಚಿಕೆ ಸೂತ್ರವನ್ನು ಚರ್ಚಿಸಲು ಒಂದು ಅವಕಾಶವಾಗಿದೆ ಎಂದು ಹೇಳಿದ್ದಾರೆ.

- Advertisement -

2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಬಹುಪಾಲು ರಾಜಕೀಯ ಪಕ್ಷಗಳು ಸೀಟು ಹಂಚಿಕೆ ಸೂತ್ರ ಒಪ್ಪಿಕೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.

ಎಲ್ಲರೂ ಒಟ್ಟಿಗೆ ಇರುತ್ತಾರೆ ಎಂದು ನಾನು ಭಾವಿಸುತ್ತೇನೆ. ಸೀಟು ಹಂಚಿಕೊಳ್ಳುವುದನ್ನು ಬಹುಶಃ ಒಬ್ಬರು ಅಥವಾ ಇಬ್ಬರು ಒಪ್ಪದಿರಬಹುದು. ಈ ಸೀಟು ಹಂಚಿಕೆ ಬಗ್ಗೆ ಚರ್ಚಿಸಲು ಅವಕಾಶವಿದೆ. ಸಭೆಯಲ್ಲಿ ಅದನ್ನು ವಿವರವಾಗಿ ಚರ್ಚಿಸಲು ಉತ್ತಮ ಅವಕಾಶವಿದ್ದು, ಬಹುತೇಕ ಪಕ್ಷಗಳು ಒಪ್ಪಿಗೆ ನೀಡುತ್ತವೆ. ನನಗೆ ಯಾವುದೇ ಅಜೆಂಡಾ ಅಥವಾ ದ್ವೇಷವಿಲ್ಲ. ಚುನಾವಣೆಯ ನಂತರ, ಎಲ್ಲರೂ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

- Advertisement -

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಬಯಸುತ್ತೀರಾ ಎಂದು ಕೇಳಿದಾಗ, ಈ ವಿಚಾರದಲ್ಲಿ ಚರ್ಚಿಸಲು ಮುಕ್ತವಾಗಿದ್ದೇವೆ ಎಂದು ಹೇಳಿದ್ದಾರೆ.

ದೆಹಲಿಗೆ ಆಗಮಿಸಿರುವ ಮಮತಾ ಮಂಗಳವಾರದ ‘ಇಂಡಿಯಾ’ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 20 ರಂದು ಪ್ರಧಾನಿ ನರೇಂದ್ರ ಮೋದಿಯ ಅವರನ್ನು ಭೇಟಿಯಾಗಲಿದ್ದಾರೆ.



Join Whatsapp