ಅಯೋಧ್ಯೆ: ಮೇ ತಿಂಗಳಿಂದ ಮಸ್ಜಿದ್ ನಿರ್ಮಾಣ ಕಾಮಗಾರಿ ಆರಂಭ

Prasthutha|

ಲಕ್ನೋ: ಅಯೋಧ್ಯೆಯ ಪ್ರಸ್ತಾಪಿತ ಮಸ್ಜಿದ್ ನಿರ್ಮಾಣ ಕಾಮಗಾರಿ ಧನ್ನಿಪುರ್‌ನಲ್ಲಿ ಮುಂದಿನ ವರ್ಷ ಮೇನಿಂದ ಆರಂಭವಾಗಲಿದೆ ಎಂದು ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಶನ್‌ ಟ್ರಸ್ಟ್‌ ತಿಳಿಸಿದೆ.

- Advertisement -

ಮುಂದಿನ ವರ್ಷ ಫೆಬ್ರವರಿಗಾಗುವಾಗ ಮಸ್ಜಿದ್ ವಿನ್ಯಾಸ ಅಂತಿಮಗೊಳ್ಳಲಿದೆ. ಫೆಬ್ರವರಿಯಲ್ಲಿ ಜಮೀನಿನ ಸ್ಥಳದಲ್ಲಿ ಕಚೇರಿ ನಿರ್ಮಿಸಲಾಗುತ್ತದೆ. ಮೇನಿಂದ ಮಸ್ಜಿದ್ ನಿರ್ಮಾಣ ಕಾರ್ಯವು ಆರಂಭವಾಗಲಿದೆ.

ಈ ಮಸ್ಜಿದ್ 40,000 ಚದರ ಅಡಿ ಜಾಗದಲ್ಲಿ ನಿರ್ಮಾಣಗೊಳ್ಳಲಿದ್ದು, ದೇಣಿಗೆ ಸಂಗ್ರಹಕ್ಕಾಗಿ ಪ್ರತಿ ರಾಜ್ಯದಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಗೆ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಝಫ‌ರ್‌ ಫಾರೂಕಿ ತಿಳಿಸಿದ್ದಾರೆ.

- Advertisement -

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯ ಧನ್ನಿಪುರ್‌ನಲ್ಲಿ ಮಸ್ಜಿದ್‌ಗಾಗಿ ಸ್ಥಳ ನೀಡಲಾಗಿತ್ತು.



Join Whatsapp