ಸಂಸತ್ತಿನಲ್ಲಿ ಭದ್ರತಾ ವೈಫಲ್ಯ; ದೇಶದಲ್ಲಿ ನಿರ್ಮಾಣವಾಗುತ್ತಿರುವ ನಿರೂಪಣೆಗಳ ಬಗ್ಗೆ ಎಚ್ಚರದಿಂದಿರಬೇಕು: ಪ್ರಕಾಶ್ ರೈ

Prasthutha|

ಕೊಚ್ಚಿನ್: ದೇಶದಲ್ಲಿ ನಿರ್ಮಾಣವಾಗುತ್ತಿರುವ ನಿರೂಪಣೆಗಳ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ನಟ-ನಿರ್ಮಾಪಕ ಪ್ರಕಾಶ್ ರೈ ಹೇಳಿದ್ದಾರೆ.

- Advertisement -

ಕೇರಳದ 28ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಟ ಮತ್ತು ಚಲನಚಿತ್ರ ನಿರ್ಮಾಪಕ ಪ್ರಕಾಶ್ ರೈ, ದೇಶದಲ್ಲಿ ನಿರ್ಮಾಣವಾಗುತ್ತಿರುವ ನಿರೂಪಣೆಗಳ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ಒತ್ತಿ ಹೇಳಿದರು. ಶುಕ್ರವಾರ ನಡೆದ ಐಎಫ್‌ಎಫ್‌ಕೆ ಸಮಾರೋಪ ಸಮಾರಂಭದಲ್ಲಿ ಅವರು ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯನ್ನು ವಿಶೇಷವಾಗಿ ಪ್ರಕಾಶ್ ರೈ ಎತ್ತಿ ತೋರಿಸಿದರು. ‘ನಿಮ್ಮ ಪ್ರೀತಿ, ನಿಮ್ಮಲ್ಲಿರುವ ನಂಬಿಕೆಗಳು ಮತ್ತು ವಿಶೇಷವಾಗಿ ದೇವರ ನಾಡಿನಲ್ಲಿ ರಾಜಕೀಯದಿಂದ ದೇವರನ್ನು ದೂರವಿಟ್ಟಿರುವುದು ಸದಾ ಖುಷಿಯ ಸಂಗತಿ. ಈ ನಿರೂಪಣೆಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಉದಾಹರಣೆಗೆ, ಹಿಂದಿನ ದಿನ ಸಂಸತ್ತಿನ ಮೇಲೆ ನಡೆದ ದಾಳಿ. ಪ್ರತಿಭಟಿಸಲು ಬಯಸಿದ 6 ಜನರ ಸುತ್ತ ನಿರೂಪಣೆಗಳನ್ನು ನಾವು ನೋಡುತ್ತಿದ್ದೇವೆ. ಜೋಕರ್ ಗಳಂತೆ ಜಗಳವಾಡುವ ಪತ್ರಕರ್ತರ ಗುಂಪೇ ನಮ್ಮಲ್ಲಿದೆ ಎಂದರು.



Join Whatsapp