ತಿರುವನಂತಪುರಂ: ದೇವಸ್ಥಾನದ ಉತ್ಸವಕ್ಕೆ ಕರೆ ತಂದಿದ್ದ ಆನೆಯೊಂದು ಮದವೇರಿ 2 ಕಾರು, ಒಂದು ಟೆಂಪೋ ಟ್ರಾವೆಲ್ಲರ್ ಅನ್ನು ಜಖಂಗೊಳಿಸಿದ ಘಟನೆ ತ್ರಿಶ್ಯೂರ್ ಜಿಲ್ಲೆಯಲ್ಲಿ ನಡೆದಿದೆ.
ತೃಪ್ರಯಾರ್ ನಲ್ಲಿರುವ ಶ್ರೀರಾಮ ಕ್ಷೇತ್ರದ ಉತ್ಸವಕ್ಕೆ ಪ್ರತಿ ವರ್ಷ ಆನೆಯನ್ನು ಕರೆ ತರಲಾಗುತ್ತಿದೆ. ಈ ಸಂದರ್ಭದಲ್ಲಿ ಆನೆಗೆ ಮದವೇರಿ 2 ಕಾರು, ಒಂದು ಟಿಟಿಯನ್ನು ಸಂಪೂರ್ಣ ಜಖಂಗೊಳಿಸಿದೆ.
ಸೊಂಡಿಲು ಬಳಸಿ ಟಿಟಿಯನ್ನು ಪಲ್ಟಿ ಮಾಡಿ ಆಕ್ರೋಶ ಹೊರ ಹಾಕಿದೆ. ಈ ವೇಳೆ ಅಲ್ಲಿದ್ದ ಜನ ಆನೆಯ ಮೇಲೆ ಕಲ್ಲು ಎಸೆದಿದ್ದಾರೆ. ವಿಚಾರ ತಿಳಿದು ತ್ರಿಶ್ಯೂರ್ ನಿಂದ ಎಲಿಫೆಂಟ್ ಸ್ಕ್ವಾಡ್ ಸದಸ್ಯರು ಆಗಮಿಸಿ ಹಗ್ಗ ಬಳಸಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.