ಹೊಸ ವರ್ಷಾಚರಣೆಗೆ ಮಾರಲು ಸಂಗ್ರಹಿಸಿಟ್ಟಿದ್ದ 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ವಿದೇಶಿ ಪ್ರಜೆಯ ಬಂಧನ

Prasthutha|

ಬೆಂಗಳೂರು: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಶೇಖರಿಸಿಟ್ಟಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಬಂಧಿಸಿದೆ.

- Advertisement -

ನೈಜೀರಿಯಾ ಮೂಲದ ಲಿಯೋನಾರ್ಡ್ ಒಕ್ವುಡಿಲಿ (44) ಬಂಧಿತ ಆರೋಪಿ.

ಈತನಿಂದ 16 ಕೆ.ಜಿ ಮಾದಕ ಪದಾರ್ಥ, 500 ಗ್ರಾಂ ತೂಕದ ಕೊಕೇನ್ ಹಾಗೂ 1 ಮೊಬೈಲ್ ಹಾಗೂ ಇತರೆ ವಸ್ತುಗಳು ಸೇರಿ ಅಂದಾಜು 21 ಕೋಟಿ ರೂ. ಬೆಲೆ ಬಾಳುವ ಡ್ರಗ್ಸ್ ವಶಕ್ಕೆ ಪಡೆದಿದೆ.



Join Whatsapp