ಬೆಳಗಾವಿ: ಸುವರ್ಣಸೌಧ ವಿಧಾನಸಭೆಯಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ. ನನಗೆ ಬಿಟ್ಟರೆ ಇವತ್ತೇ ತೆರವು ಮಾಡುತ್ತೇನೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಸ್ಪೀಕರ್ ಯುಟಿ ಖಾದರ್, ಮಂತ್ರಿಗಳು ಮತ್ತು ಶಾಸಕರ ಕೆಲಸ ಸರಿಯಾದ ಸಮಯಕ್ಕೆ ಬರುವುದು, ಉತ್ತಮವಾದ ಚರ್ಚೆಗೆ, ಪ್ರಶ್ನೆಗೆ ಉತ್ತರ ಕೊಡುವಂತಹ ಕೆಲಸಗಳನ್ನ ಚೆನ್ನಾಗಿ ಮಾಡಲಿ ಎಂದರು.
ಯಾರು ಏನು ಕೆಲಸ ಮಾಡಬೇಕೋ ಅದನ್ನ ಮಾಡಲಿ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಈ ರಥವನ್ನ ಮುಂದಕ್ಕೆ ತೆಗೆದುಕೊಂಡು ಹೋಗಿ. ಇಲ್ಲವಾದರೆ ಅಲ್ಲೇ ಇಟ್ಟು ಬಿಡಿ, ಹಿಂದಕ್ಕೆ ಹೋಗಬೇಡಿ ಅಂತ ಅಂಬೇಡ್ಕರ್ ಹೇಳಿದ್ದಾರೆ. ಹಿಂದೆ ಏನಾಗಿದೆ ಅನ್ನೋದು ಬೇಡ. ಮುಂದೆ ಏನಾಗಬೇಕು ಅಂತ ಸಂವಿಧಾನ ಬದ್ಧವಾಗಿ ಕೆಲಸ ಮಾಡಬೇಕು ಎಂದರು.