ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಪತ್ನಿಯನ್ನು ಭೇಟಿ ಮಾಡಲು ಆರು ಗಂಟೆಗಳ ಕಾಲಾವಕಾಶ!

Prasthutha|

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಡಿಸಿಎಂ ಮತ್ತು ಆಮ್ ಆದ್ಮಿ ನಾಯಕ ಮನೀಶ್ ಸಿಸೋಡಿಯಾ ಜೈಲು ಸೇರಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಸೀಮಾ ಸಿಸೋಡಿಯಾರನ್ನು ಭೇಟಿಯಾಗಲು ಅವರಿಗೆ ಬರೀ ಆರು ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಶನಿವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಭೇಟಿ ಮಾಡಲು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್​ಪಾಲ್ ಅವಕಾಶ ನೀಡಿದ್ದಾರೆ.

- Advertisement -

ದೆಹಲಿ ಅಬಕಾರಿ ನೀತಿ 2021-22ರಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಸೋಡಿಯಾ ಅವರನ್ನು ಪ್ರಸ್ತುತ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದ ಬಂಧನದಲ್ಲಿರಿಸಿದ್ದು, ಎರಡರಲ್ಲೂ ಜಾಮೀನು ನಿರಾಕರಿಸಲಾಗಿದೆ.

ಸಿಸೋಡಿಯಾ ಅವರನ್ನು ಮೊದಲು ಫೆ.27ರಂದು ಸಿಬಿಐ ಬಂಧಿಸಿದ್ದು, ನಂತರ ಮಾ.9ರಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲಾಗಿತ್ತು. ಬಂಧನದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ಅವರು ಫೆ. 28ರಂದು ರಾಜೀನಾಮೆ ನೀಡಿದ್ದರು.



Join Whatsapp