ದೀಪಾವಳಿ ಬೋನಸ್: ಉದ್ಯೋಗಿಗಳಿಗೆ ರಾಯಲ್ ಎನ್ ಫೀಲ್ಡ್ ಉಡುಗೊರೆ

Prasthutha|

ನೀಲಗಿರಿ: ತಮಿಳುನಾಡಿನ ಟೀ ಎಸ್ಟೇಟ್ ಮಾಲಿಕರೊಬ್ಬರು ತಮ್ಮ ಉದ್ಯೋಗಿಗಳಿಗೆ ರಾಯಲ್ ಎನ್ ಫೀಲ್ಡ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಉಡುಗೊರೆಯನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಾರೆ.

- Advertisement -


ನೀಲಗಿರಿ ಜಿಲ್ಲೆಯ ಕೋಟಗಿರಿ ನಗರದಲ್ಲಿರುವ ಟೀ ಎಸ್ಟೇಟ್ನ ಮಾಲಿಕ ಪಿ. ಶಿವಕುಮಾರ ತಮ್ಮ 15 ಉದ್ಯೋಗಿಗಳಿಗೆ ದೀಪಾವಳಿಗಾಗಿ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. 42 ವರ್ಷದ ಎಸ್ಟೇಟ್ ಮಾಲಿಕರು ಅವರುಗಳಿಗೆ ಬೈಕ್ ಕೀಗಳನ್ನು ಕೊಡುತ್ತಾರೆ.



Join Whatsapp