ಬಿಗ್ ಷಾಕಿಂಗ್..!: 81.5 ಕೋಟಿ ಭಾರತೀಯರ ಆಧಾರ್‌ ಮಾಹಿತಿ ಲೀಕ್

Prasthutha|

ಬೆಂಗಳೂರು: ದೊಡ್ಡ ಆಘಾತಕಾರಿ ಸುದ್ದಿಯೊಂದು ಹೊರಬಂದಿದ್ದು, ದೇಶದಲ್ಲಿಯೇ  ಅತ್ಯಂತ ದೊಡ್ಡ ಡೇಟಾ ಸೋರಿಕೆಯ ಪ್ರಕರಣ ನಡೆದಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಿಂದ 81.5 ಕೋಟಿಗೂ ಹೆಚ್ಚು ಭಾರತೀಯರ ವೈಯಕ್ತಿಕ ವಿವರಗಳು ಆನ್‌ಲೈನ್‌ನಿಂದ ಸೋರಿಕೆಯಾಗಿವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಲ್ಲಿ ನೋಂದಾಯಿತವಾಗಿರುವ ನಾಗರಿಕರ ಕೋವಿಡ್-19 ಪರೀಕ್ಷಾ ವಿವರಗಳ ಮಾಹಿತಿಯನ್ನು ಕದ್ದಿರುವುದಾಗಿ ಹ್ಯಾಕರ್ ಒಬ್ಬ ಹೇಳಿಕೊಂಡಿದ್ದಾನೆ. ಈತ ಹೇಳಿಕೊಳ್ಳುವುದಕ್ಕಿಂತಲೂ ಮೊದಲೇ ಈ ಮಾಹಿತಿ ಸೆಕ್ಯುರಿಟಿ ಎಂಬ ಅಮೆರಿಕದ ಸೈಬರ್ ಭದ್ರತೆ ಮತ್ತು ಗುಪ್ತಚರ ಸಂಸ್ಥೆಯಲ್ಲಿ ಅನಾವರಣಗೊಂಡಿದೆ.

- Advertisement -

 ICMR ನಲ್ಲಿ ನೋಂದಾಯಿಸಲಾದ ನಾಗರಿಕರ ಕೋವಿಡ್-19 ಪರೀಕ್ಷಾ ವಿವರಗಳಿಂದ ಇವುಗಳನ್ನು ಕದ್ದಿರುವುದಾಗಿ ಹ್ಯಾಕರ್ ಹೇಳಿಕೊಂಡಿದ್ದಾನೆ. ಹ್ಯಾಕರ್ pwn001,  X  (ಹಿಂದಿನ Twitter) ಮುಂತಾದ್ದರಲ್ಲಿ  ಹೆಸರು, ಫೋನ್ ಸಂಖ್ಯೆ ಮತ್ತು ವಿಳಾಸಗಳೊಂದಿಗೆ ಆಧಾರ್ ಮತ್ತು ಪಾಸ್‌ಪೋರ್ಟ್ ಮಾಹಿತಿಯನ್ನೂ ಲೀಕ್ ಮಾಡಿದ್ದಾನೆ.  ‘pwn001’ ಆಧಾರ್ ಡೇಟಾದೊಂದಿಗೆ ನಾಲ್ಕು ದೊಡ್ಡ ಮಾದರಿಗಳೊಂದಿಗೆ ಸ್ಪ್ರೆಡ್‌ಶೀಟ್‌ಗಳನ್ನು ಪೋಸ್ಟ್ ಮಾಡಿದ್ದಾನೆ. ಇವುಗಳನ್ನು ಅಧಿಕೃತ ಆಧಾರ್ ಕಾರ್ಡ್ ಐಡಿಗಳು ಎಂದು ಗುರುತಿಸಲಾಗಿದೆ.

ICMR ಅಥವಾ ಸರ್ಕಾರದಿಂದ ಇದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲದಿದ್ದರೂ, ICMR ನಿಂದ ದೂರನ್ನು ಸ್ವೀಕರಿಸಿದ ನಂತರ ಸಿಬಿಐ ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ,



Join Whatsapp