ಪ್ರಧಾನಿ ಮೋದಿ ಒಬ್ಬ ‘ಹೇಡಿ’; ಭಾರತದ ಭೂ ಪ್ರದೇಶ ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ : ರಾಹುಲ್ ಗಾಂಧಿ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಚೀನಾದ ಮುಂದೆ ನಿಲ್ಲಲಾಗದ ಒಬ್ಬ ‘ಹೇಡಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಭೂ ಪ್ರದೇಶವನ್ನು ಚೀನಾಕ್ಕೆ ಅವರು ಯಾಕೆ ಬಿಟ್ಟುಕೊಟ್ಟಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

- Advertisement -

ದೇಶದ ಭೂಭಾಗವನ್ನು ಕಾಪಾಡೋದು ಪ್ರಧಾನಿಯ ಜವಾಬ್ದಾರಿ. ಆದರೆ, ಪ್ರಧಾನಿ ಮೋದಿ ದೇಶದ ಭೂಮಿಯನ್ನು ಚೀನಾಕ್ಕೆ ನೀಡಿದ್ದಾರೆ. ಈ ಬಗ್ಗೆ ಅವರು ದೇಶಕ್ಕೆ ಉತ್ತರಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಚೀನಾ ಮತ್ತು ಭಾರತದ ಮಿಲಿಟರಿ ಒಪ್ಪಂದದ ಬಗ್ಗೆ ವಿಸ್ತೃತ ವಿವರಣೆ ನೀಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ.

- Advertisement -

ನಮ್ಮ ಸೈನ್ಯವನ್ನು ಈಗ ಫಿಂಗರ್ ಪಾಯಿಂಟ್ ಮೂರರಲ್ಲಿ ಇರಿಸಲಾಗಿದೆ. ಫಿಂಗರ್ ಪಾಯಿಂಟ್ 4 ಕೂಡ ಭಾರತಕ್ಕೆ ಸೇರಿದ ಪ್ರದೇಶವಾಗಿದೆ. ಆದರೆ, ಫಿಂಗರ್ 4ರಿಂದ ಫಿಂಗರ್ 3ಕ್ಕೆ ನಮ್ಮ ಸೈನ್ಯವನ್ನು ಕರೆಸಿಕೊಳ್ಳುವ ಮೂಲಕ, ನಮ್ಮ ದೇಶದ ಪ್ರದೇಶವನ್ನು ಚೀನಾಕ್ಕೆ ಪ್ರಧಾನಿ ಮೋದಿ ಬಿಟ್ಟುಕೊಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಆಪಾದಿಸಿದ್ದಾರೆ.  

Join Whatsapp