ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲು ನವೆಂಬರ್ 3 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ.
ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಆರು ಕ್ಷೇತ್ರಗಳನ್ನು ಕೇಳಿದೆ ಎನ್ನಲಾಗಿದ್ದು, ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ತನಗೆ ನೀಡಲು ಬೇಡಿಕೆ ಇಡಲಿದೆ ಎನ್ನಲಾಗಿದೆ.
ಆದರೆ ಬಿಜೆಪಿ ಹೈಕಮಾಂಡ್ ಕೇವಲ ನಾಲ್ಕು ಸೀಟು ಬಿಟ್ಟು ಕೊಡಲು ಸಿದ್ಧವರೋದಾಗಿಯೂ, ರಾಜ್ಯ ಬಿಜೆಪಿ ನಾಯಕರು ಅದಕ್ಕಿಂತಲೂ ಕಡಿಮೆ ಕ್ಷೇತ್ರಗಳನ್ನು ನೀಡಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಕುಮಾರಸ್ವಾಮಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಸೀಟು ಹಂಚಿಕೆ ಅಂತಿಮ ಗೊಳಿಸಲು ಅಮಿತ್ ಶಾರನ್ನು ಬೇಟಿಯಾಗಿದ್ದರು. ಈಗ ಸೀಟು ಹಂಚಿಕೆ ಅಂತಿಮಗೊಳಿಸಲು ಮಾತುಕತೆಗಾಗಿ ಬಿಜೆಪಿ ಹೈಕಮಾಂಡ್ ನವೆಂಬರ್ 3 ರಂದು ಕುಮಾರಸ್ವಾಮಿಯವರಿಗೆ ಸಮಯ ನೀಡಿತ್ತು ಎನ್ನಲಾಗಿದೆ. ಸದ್ಯ ಹೆಚ್ಡಿಕೆ ಪತ್ನಿಯೊಂದಿಗೆ ದುಬೈನಲ್ಲಿದ್ದು, ಅಲ್ಲಿಂದಲೇ ನೇರವಾಗಿ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ.
ಆದರೆ ಬಿಜೆಪಿ ಹೈಕಮಾಂಡ್ ಕೇವಲ ನಾಲ್ಕು ಸೀಟು ಬಿಟ್ಟು ಕೊಡಲು ಆಸಕ್ತಿ ವಹಿಸಿದೆ ಎನ್ನಲಾಗಿದೆ. ಇತ್ತೀಚಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರನ್ನು ಭೇಟಿ ಮಾಡಿದ್ದರು.
ಇತ್ತೀಚೆಗೆ ಕುಮಾರಸ್ವಾಮಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಸೀಟು ಹಂಚಿಕೆ ಅಂತಿಮ ಗೊಳಿಸಲು ಅಮಿತ್ ಶಾರನ್ನು ಬೇಟಿಯಾಗಿದ್ದರು. ಈಗ ಸೀಟು ಹಂಚಿಕೆ ಅಂತಿಮಗೊಳಿಸಲು ಮಾತುಕತೆಗಾಗಿ ಬಿಜೆಪಿ ಹೈಕಮಾಂಡ್ ನವೆಂಬರ್ 3 ರಂದು ಕುಮಾರಸ್ವಾಮಿಯವರಿಗೆ ಸಮಯ ನೀಡಿದೆ.ಕುಮಾರಸ್ವಾಮಿ ಅವರು ತಮ್ಮ ಪತ್ನಿಯೊಂದಿಗೆ ಸದ್ಯ ದುಬೈನಲ್ಲಿದ್ದು, ಅಲ್ಲಿಂದಲೇ ನೇರವಾಗಿ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ.